ಸುಳ್ಯ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸುಳ್ಯದ ಉದ್ಯಮಿ ಪ್ರಭಾಕರನ್ ನಾಯರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆನಂದ ಖಂಡಿಗ, ಖಜಾಂಜಿಯಾಗಿ ಪ್ರಸನ್ನ ಕುಮಾರ್ ಕಲ್ಲಾಜೆ, ಆಯ್ಕೆಯಾಗಿದ್ದಾರೆ.ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಅಬ್ದುಲ್ ಮಜೀದ್ ಕೆ.ಎಂ, ವೊಕೇಶನಲ್ ಸರ್ವೀಸ್ ನಿರ್ದೇಶಕರಾಗಿ ಹರಿರಾಯ ಕಾಮತ್, ಕಮ್ಯುನಿಟಿ ಸರ್ವೀಸ್ ನಿರ್ದೇಶಕರಾಗಿ ಕಸ್ತೂರಿ ಶಂಕರ್, ಇಂಟರ್ ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ ಡಾ.ಸುಧಾಕರ ಭಟ್, ಯೂತ್ ಸರ್ವೀಸ್ ನಿರ್ದೇಶಕರಾಗಿ ಸನತ್.ಪಿ. ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಪ್ರಭಾಕರ ನಾಯರ್ ಅವರು ಕುರುಂಜಿಭಾಗ್ ನಲ್ಲಿ ಸ್ವಾಗತ್ ಐಸ್ ಕ್ರೀಂ ಉದ್ಯಮ ನಡೆಸುತ್ತಿದ್ದಾರೆ. ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಸುಳ್ಯದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಉಪಾಧ್ಯಕ್ಷರಾಗಿದ್ದಾರೆ. ರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ
- Thursday
- November 21st, 2024