
ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ ವಿನಯ್ ಬಾಳಿಲ (ಕುಕ್ಕುತ್ತಡಿ) ಅವರು ಕಳೆದ ರಾತ್ರಿ ಮನೆ ಸಮೀಪದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
6 ತಿಂಗಳ ಹಿಂದೆ ವಿವಾಹವಾಗಿದ್ದ ಇವರು ಪತ್ನಿ, ತಂದೆ ಬಾಬು ಗೌಡ, ತಾಯಿ ಚಂದ್ರಾವತಿ, ಸಹೋದರ ಸುರೇಶ, ಸಹೋದರಿ ಶ್ರೀಮತಿ ನವೀನ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.