
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಕಿರುಚಿತ್ರ ಸ್ಥಿತಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್ ರಾಂ ಸುಳ್ಯ ಪ್ರಧಾನವಾಗಿ ಅಭಿನಯಿಸುವ ಈ ಕಿರುಚಿತ್ರದ ಕ್ಯಾಮರಾ ಝೀಟೋಗ್ರಫಿಯ ಝೀಶನ್,ಸಹ ನಿರ್ದೇಶನ ಹರ್ಷಿತ್ ಕೆ, ತಾಂತ್ರಿಕವಾಗಿ ಉಪನ್ಯಾಸಕರಾದ ಕುಸುಮಾಧರ ಸಂಕಡ್ಕ ಮತ್ತು ರವೀಶ್ ಪಡ್ಡಂಬೈಲ್ ಸಹಕರಿಸಿದ್ದರು.