- Friday
- November 22nd, 2024
ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ವೆಂಕಟರಮಣ ದೇವರ ಹರಿಸೇವೆ ಮತ್ತು ಧರ್ಮ ನಡಾವಳಿಯು ಫೆ.20 ಮತ್ತು ಫೆ.21 ರಂದು ಕುಟುಂಬದ ಧರ್ಮಚಾವಡಿಯಲ್ಲಿ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯವರು, ಕುಟುಂಬಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಎಡಮಂಗಲ ಇದರ ವತಿಯಿಂದ ಸರಕಾರಿ ಪ್ರೌಢ ಶಾಲೆ ಎಡಮಂಗಲಕ್ಕೆ 2 ಕೆ.ವಿ. ಇನ್ವರ್ಟರ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ನಿರ್ದೇಶಕರಾದ ಅವಿನಾಶ್ ದೇವರಮಜಲು ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ್ ಡಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ, ಉಪಾಧ್ಯಾಯರಾದ ಪದ್ಮನಾಭ ಮತ್ತು ರಮೇಶ್ ಉಪಸ್ಥಿತರಿದ್ದರು.
ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ರಂದು ಜರುಗಲಿದ್ದು, ನಡಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.21 ರಂದು ನಡೆಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ರೈ ಕಳಂಜ, ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ರಘುನಾಥ ರೈ ಕಳಂಜ, ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾದ ಶೇಷಪ್ಪ...
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಫೆ.20 ರಂದು ಚುನಾವಣೆ ನಡೆದಿದ್ದು ಆಡಳಿತರೂಢ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. 12 ಸ್ಥಾನಗಳ ಪೈಕಿ ಬಿಜೆಪಿ 10 ಹಾಗೂ ಕಾಂಗ್ರೆಸ್ 2 ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ದಾಮೋದರ ಯಂ. ಮದುವೆಗದ್ದೆ, ಬಾಸ್ಕರ ರಾವ್ ಯು.ವಿ. ಕಂಬಳಿಮೂಲೆ, ರಾಜೇಶ್ ನೆಕ್ಕಿಲ,...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ "ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ" ಎಂಬ ಯೋಜನೆಯಡಿ ಕೊಲ್ಲಮೊಗ್ರ ಗ್ರಾಮ ಪಂಚಾಯತಿ ಮಟ್ಟದ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ಮಯೂರ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಾಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು....
ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ "ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ" ಎಂಬ ವಿನೂತನ ಯೋಜನೆಯಡಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಲ್ಲಿ ಫೆ.18 ರಂದು ರಂದು ಅಂಬಿಕಾ ಸ್ತೀ ಶಕ್ತಿ ಗೊಂಚಲಿನ ಅದ್ಯಕ್ಷೆ ಶ್ರೀಮತಿ ಶೈಲಜಾ ರವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ...
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದೆ. ಫೆ.20 ರಂದು ಬೆಳಗ್ಗೆಯಿಂದ ಹಸಿರುವಾಣಿ ಸಮರ್ಪಣೆ ನಡೆದು ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ತಂತ್ರಿಗಳ ಸ್ವಾಗತ ಕಾರ್ಯಕ್ರಮ, ಹಾಗೂ ರಾತ್ರಿ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7:30 ರಿಂದ ವಿಠಲ...
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಂಯೋಜಿಕರಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ , ತಾಜ್ ಮಹಮ್ಮದ್ ಸಂಪಾಜೆ ಯವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜನಾಬ್ ನದೀಮ್ ಜಾವೇದರ ಅನುಮೋದನೆಯೊಂದಿಗೆ.ರಾಜ್ಯ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಡಾ.ಜಾಫರ್ ಅಹ್ಮದ್ ಖಾನ್ ಮತ್ತು ಡಿ.ಕೆ.ಶಿವಕುಮಾರ್ ರವರ ಅಂಗಿಕರದೊಂದಿಗೆ ರಾಜ್ಯ ಅಲ್ಪಸಂಖ್ಯಾತ ಘಟಕದ ಚೆರ್ಮೇನ್ ಸಯ್ಯದ್ ಅಹಮದ್...
Loading posts...
All posts loaded
No more posts