Ad Widget

ಗುತ್ತಿಗಾರು: ವಾಲಿಬಾಲ್ ನಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ


ಪದವಿ ಪೂರ್ವ ಶಿಕ್ಷಣ ಇಲಾಖೆ.ದ.ಕ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇವರ ಆಶ್ರಯದಲ್ಲಿ ಇಂದು ನಡೆದ ಪದವಿ ಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಎರಡು ತಂಡಗಳು ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ತಂಡದಲ್ಲಿ ಚಿಂತನ್.ಕೆ, ಮನೀಷ್.ಕಾರ್ತಿಕ್.ಟಿ.ಯು, ನಿತಿನ್ ಕುಮಾರ್,ಆನಂದ್ ರಾಜ್.ಆರ್,ದೀಪಕ್, ನೋಯಲ್ ಗೌಡ.ಕೆ, ರಂಜಿತ್.ಕೆ. ಚೈತ್ರ , ಚರಿಷ್ಮಾ.ಪಿ.ಆರ್, ಮೇಘಶ್ರೀ. ಯಶೀಕ.ಹೆಚ್,ಕಾವೇರಿ,ದೀಕ್ಷಾ.ಹೆಚ್.ವಿ, ಗೀತಾ.ಸಿ, ಚೈತನ್ಯ, ಸ್ವಾತಿ ಕೆ.,ವಿಭಾಶ್ರೀ,ಹವ್ಯಶ್ರೀ ಇವರು ಹಾಗೂ
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಹೈಸ್ಕೂಲ್ ವಿಭಾಗದ ಗೋಪಾಲಕೃಷ್ಣ ಏನೇಕಲ್ಲು ಹಾಗೂ ಬ್ಲೆಸ್ಡ್ ಕುರಿಯಕೊಸ್ ನ ರಮೇಶ್ ಕೆ. ಇವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ.ಪಿ ಹಾಗೂ ಉಪನ್ಯಾಸಕರಾದ ರಂಜಿತ್ ಅಂಬೆಕಲ್ಲು ಹಾಗೂ ಶೃತಿ.ಕೆ.ತಂಡದ ವ್ಯವಸ್ಥಾಪಕರಾಗಿ ಹಾಗೂ ಎಲ್ಲಾ ಉಪನ್ಯಾಸಕ ವೃಂದ ಸಹಕರಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!