Ad Widget

ನಗರ ಪಂಚಾಯತ್ ಬಜೆಟ್ ತಯಾರಿ ಬಗ್ಗೆ ಸಭೆ

ಸುಳ್ಯ, ನ.ಪಂ.  ನೀರಿನ  ಮೊತ್ತವನ್ನು ಸರಿಯಾಗಿ ಪಾವತಿಸದಿರುವುದರಿಂದ  ಇದರ ಬಗ್ಗೆ ಅದಾಲತ್ ನಡೆಸಿ ಕಂತುಗಳ ಮೂಲಕ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಹೇಳಿದರು.
ನ.ಪಂ. ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾಲೋಚನ  ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.  ಎಪ್ರಿಲ್ ಅಂತ್ಯದೊಳಗೆ  ತೆರಿಗೆ ಪಾವತಿಸುವವರಿಗೆ  ೫ ಶೇ.ರಿಯಾಯಿತಿ ಸಿಗಲಿದೆ. ಜೂನ್ ನಂತರ ಪ್ರತೀ ತಿಂಗಳಿಗೆ ೨ಶೇ. ಹೆಚ್ಚುವರಿಯಾಗುತ್ತದೆ ಯಾರೂ ತೆರಿU ವಂಚಿಸಬಾರದು ಎಂದು ಮನವಿ ಮಾಡಿದರು. ಸಾರ್ವಜನಿಕರ  ಸಲಹೆ ಸೂಚನೆಗಳನ್ನು  ಪಡೆಯಲು ಪ್ರತೀ ೩ ತಿಂಗಳಿಗೊಮ್ಮೆ ವಾರ್ಡ್ ಸಭೆ ಕರೆಯಲಾಗುವುದು ಎಂದರು.

ವಿನೋದ್ ಅವರು ಮಾತನಾಡಿ ನಗರದಲ್ಲಿ ಕೋಳಿ ಹಾಗೂ ಇತರ ಮಾಂಸ ತ್ಯಾಜ್ಯಗಳನ್ನು  ಅಲ್ಲಲ್ಲೇ ಎಸೆಯಲಾಗುತ್ತಿದೆ. ಇದನ್ನು ತಪ್ಪಿಸಲು ನ.ಪಂ. ವತಿಯಿಂದ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಅದಕ್ಕೆ ಇಂತಿಷ್ಟು ಶುಲ್ಕ ವಿಽಸಬೇಕು. ಇದರಿಂದ ಸ್ವಚ್ಛತೆ ಹಾಗೂ ನ.ಪಂ.ಗೆ ಆದಾಯ ಮೂಲ ಸೃಷ್ಟಿಯಾಗಲಿದೆ ಎಂದರು. ಅಧ್ಯಕ್ಷರು ಈ ಕುರಿತು ಯೋಜನೆ ರೂಪಿಸುವ ಭರವಸೆ ನೀಡಿದರು.  ಡಿ.ಯಂ ಶಾರೀಖ್‌ನವರು ಮೀನು ಮಾರುಕಟ್ಟೆ ಬಗ್ಗೆ ಮಾತನಾಡಿ ಗಾಂಧಿನಗರ ಮೀನು ಸ್ಟಾಲುಗಳನ್ನು ಬಾಡಿಗೆ ಪಡಕೊಂಡವರು ಇತರರಿಗೆ ಒಳಬಾಡಿಗೆಗೆ ನೀಡಿದ ಬಗ್ಗೆ ಪ್ರಸ್ತಾಪಿಸಿದಾಗ ಇದರ ಬಗ್ಗೆ ನ.ಪಂ ಅಧಿಕಾರಿಗಳು ತನಿಖೆ ನಡೆಸಿದ್ದು ಅವರ ನೌಕರರು ಮಾತ್ರ ಇದ್ದು ಅವರು ಮುಖ್ಯವಾಗಿ ನ.ಪಂ ಬಾಡಿಗೆಗೆ ಪಡೆದ ವ್ಯಕ್ತಿಯನ್ನು ಹೆಸರನ್ನುತಿಳಿಸಿದ ಪ್ರಕಾರ ಯಾವುದೇ ಕ್ರಮ ಕೈಗೊಳ್ಳಲಿಕ್ಕೆ ಅಸಾಧ್ಯ ಎಂಬುದಾಗಿ ಮುಖ್ಯಾಧಿಕಾರಿ ಬಿ.ಎಂ ಸ್ವಾಮಿ ತಿಳಿಸಿದರು. ಅಶೋಕ್ ಎಡಮಲೆ ಅವರು ಮಾತನಾಡಿ ನ.ಪಂ. ನೀರು ಕೆಲವು ಕಡೆ ತೋಟಗಳಿಗೂ ಉಪಯೋಗವಾಗುತ್ತಿದೆ. ಇದರಿಂದ ನ.ಪಂ. ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ.  ನಿಗದಿತ ನೀರು ಹಾಗೂ ಇತರ ಬಿಲ್ ಕೂಡ ಸರಿಯಾಗಿ ಪಾವತಿಯಾಗುತ್ತಿಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರಕ್ಕೆ  ಕನಿಷ್ಟ ೧೦ ಕೋಟಿ ರೂಗಳ ಅನುದಾನವನ್ನು ಹೆಚ್ಚುವರಿಯಾಗಿ ತರಿಸಿ ಕೊಡಬೇಕು ಎಂದರು. ಬಾಕ್ಸ್: ನ.ಪಂ. ವ್ಯಾಪ್ತಿಯಲ್ಲಿ ಕಟ್ಟಡಗಳು ವಿಸ್ತರಿಸಲ್ಪಟ್ಟಿದ್ದು ತೆರಿಗೆ ಮಾತ್ರ  ವಿಸ್ತರಿಸಿದ ಕಟ್ಟಡಕ್ಕೆ ತೆರಿಗೆ ಪಾವತಿಯಾಗುತ್ತಿಲ್ಲ. ಇದರಿಂದ ನ.ಪಂ. ಆದಾಯ ಕಡಿಮೆಯಾಗಿದೆ. ಕಟ್ಟಡ ವಿಸ್ತರಣೆ ಮಾಡಿದ ಕುರಿತು ನ.ಪಂ. ವತಿಯಿಂದ ಶೀಘ್ರ ಸೂಚನೆ ನೀಡಿ ಮಹಜರು ನಡೆಸಲಾಗುವುದು ಎಂದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!