Ad Widget

ಗುತ್ತಿಗಾರು ಪದವಿಪೂರ್ವ ಕಾಲೇಜಿನ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ., ಶ್ರೀ ಶಾರದ ಪದವಿಪೂರ್ವ ಮಹಿಳಾ ಕಾಲೇಜು ಸುಳ್ಯ, ದ.ಕ. ಗೌಡ ವಿದ್ಯಾ ವರ್ಧಕ ಸಂಘ ಸುಳ್ಯ, ಇದರ ವತಿಯಿಂದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯು ಶಾರದ ಮಹಿಳಾ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಫೆ.19 ರಂದು ನಡೆಯಿತು. ಇದರಲ್ಲಿ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜು ತಂಡವು ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದೆ.

ತಂಡದಲ್ಲಿ ಚೈತ್ರ , ಚರಿಷ್ಮಾ ಪಿ.ಆರ್., ಮೇಘಶ್ರೀ, ಯಶೀಕ ಹೆಚ್.,ಕಾವೇರಿ, ದೀಕ್ಷಾ ಹೆಚ್.ವಿ., ಗೀತಾ ಸಿ., ಚೈತನ್ಯ, ಸ್ವಾತಿ ಕೆ., ವಿಭಾಶ್ರೀ, ಹವ್ಯಶ್ರೀ ಭಾಗವಹಿಸಿದ್ದಾರೆ. ಹೈಸ್ಕೂಲ್ ವಿಭಾಗದ ದೈ.ಶಿ.ಶಿಕ್ಷಕ ಗೋಪಾಲಕೃಷ್ಣ ಏನೆಕಲ್ಲು ಹಾಗೂ ಕಬ್ಬಡ್ಡಿ ಕ್ರೀಡಾಪಟು ಪ್ರತೀಕ್ಷಾ ಡಿ.ಎಸ್. ಇವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ ಪಿ., ವ್ಯವಸ್ಥಾಪಕರಾಗಿ ಉಪನ್ಯಾಸಕ ರಂಜಿತ್ ಅಂಬೆಕಲ್ಲು ಹಾಗೂ ಉಪನ್ಯಾಸಕರು ಸಹಕರಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!