Ad Widget

ಸುಳ್ಯ : ಡಿಗ್ರಿ ಕಾಲೇಜಿನಲ್ಲಿ ಹಿಂದಿ ಪರೀಕ್ಷೆಗಳ ಪ್ರಮಾಣ ಪತ್ರ ವಿತರಣಾ ಸಮಾರಂಭ

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ಪರೀಕ್ಷೆಗಳಲ್ಲಿ ಉತ್ತೀರ್ಣ ರಾದವರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಫೆ. 19 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಯುತ ಪೂಜಾರಿ ಕೆ ರವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದಿ ವಿಭಾಗದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಕೆ ಎಸ್ ಇವರು ಲಾಕ್ ಡೌನ್ ಸಮಯವನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಕಾಲೇಜಿನ 16 ವಿದ್ಯಾರ್ಥಿಗಳು ರಾಷ್ಟ್ರಭಾಷಾ ವಿಶಾರದ ಹಾಗೂ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಎಲ್ಲರಿಗೂ ಹಿಂದಿ ವಿಭಾಗದ ವತಿಯಿಂದ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಅಚ್ಯುತ ಪೂಜಾರಿ ಕೆ. ಮಾತನಾಡಿ ಹಿಂದಿ ವಿಭಾಗದ ಪ್ರಗತಿಯನ್ನು ಪ್ರಶಂಸಿಸಿ, ಮುಂದಿನ ಹಂತದ ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಚೆನ್ನೈ ನವರು ನೀಡಿದ್ದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ದ್ವಿತೀಯ ಬಿ. ಎಸ್ಸಿ ವಿದ್ಯಾರ್ಥಿನಿ ಲಾವಣ್ಯ ಕೆ ಸ್ವಾಗತಿಸಿ, ದ್ವಿತೀಯ ಬಿ. ಕಾಮ್ ವಿದ್ಯಾರ್ಥಿನಿ ಶಿಬಾಲಿ ಕೆ ಎಚ್ ವಂದಿಸಿದರು. ಶ್ರೀ. ರಾಮಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!