Ad Widget

ಕಡಬ : ಮತ್ತೆ ಪತ್ತೆಯಾದ ಚಿರತೆ – ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಫೆ.11 ರಾತ್ರಿ ಪತ್ತೆಯಾದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.

. . . . . . .

ರಾತ್ರಿ ವೇಳೆ ತೋಟಕ್ಕೆ ಹೋಗಿದ್ದ ವೇಳೆ ಹೇರ ನಿವಾಸಿ ಶೇಖರ್ ಮತ್ತು ಸೌಮ್ಯ ದಂಪತಿಗಳಿಗೆ ದಾಳಿ ಮಾಡಿದ್ದ ಈ ಚಿರತೆ ಸದ್ಯ ಅರಣ್ಯ ಇಲಾಖೆಯವರ ಕೈಗೆ ಸಿಕ್ಕಿಬಿದ್ದಿದ್ದು ಆಪರೇಷನ್ ಚೀತಾ ಯಶಸ್ವಿಯಾಗಿದೆ.

*ಕೈಕಂಬ ವಿಫಲವಾಗಿದ್ದ ಕಾರ್ಯಾಚರಣೆ*


ಫೆ. 3 ರಂದು ಕಡಬ ತಾಲೂಕಿನ ಕೈಕಂಬ ನಿವಾಸಿ ರೇಗಪ್ಪ ರವರ ನಾಯಿಯನ್ನು ಅಟ್ಟಿಸಿಕೊಂಡು ಬಂದು ಶೌಚಾಲಯಸ ಒಳಗೆ ಬಂದಿಯಾದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಬೋನಿಗೆ ಬಿದ್ದಿರುವ ಚಿರತೆ ಕೈಕಂಬದಲ್ಲಿ ಪತ್ತೆಯಾದ ಚಿರತೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿ ಇಲಾಖೆ ನಡೆಸಿದ ಯಶಸ್ವಿ ಕಾರ್ಯಾಚರಣೆ ಜನರ ಪ್ರಶಂಶೆಗೆ ಪಾತ್ರವಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!