- Thursday
- November 21st, 2024
ಹೆಣ್ಣಿಗೆ ವಿಶೇಷವಾದ ಸ್ಥಾನವನ್ನು ಕೊಟ್ಟು ಪೂಜಿಸುವ ತುಳುನಾಡಿನಲ್ಲಿಂದು ಕೆಡ್ಡಸ ಆಚರಣೆಯ ಸಂಭ್ರಮ. ಭೂಮಿಯನ್ನು ತಾಯಿಯ ಸ್ಥಾನಕ್ಕೆ ಹೋಲಿಕೆ ಮಾಡುವ ಸಂಸ್ಕೃತಿ ಹೊಂದಿರುವ ತುಳುನಾಡು ಹಲವು ಸಂಸ್ಕೃತಿಗಳನ್ನು ಒಳಗೊಂಡಿದೆ. ಈ ದಿನ ಭೂಮಿ ತಾಯಿ ಋತುಮತಿಯಾಗುವಳು ಎಂಬ ನಂಬಿಕೆ ತುಳುವರದು. ಪ್ರಕೃತಿಮಾತೆ ಹೊಸ ಹುಟ್ಟು ಪಡೆಯಲು ತಯಾರಾಗುವಳು ಎಂಬ ಸಂತಸದಿಂದ ತುಳುವರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ...
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಪೈಲಾಜೆ, ಐನೆಕಿದು ಸರ್ಕಲ್, ಶಾಲೆ, ಕೋಟೆ, ಆಚಾರಿಗದ್ದೆ, ನವಗ್ರಾಮ, ಗುಂಡಡ್ಕ ದಲ್ಲಿ ಫೆ.10 ರಂದು ಬೀದಿದೀಪ ಅಳವಡಿಸಲಾಯಿತು. ಜನತೆಯ ಬಹುದಿನದ ಬೇಡಿಕೆಯನ್ನು ಗ್ರಾ.ಪಂ.ನೂತನ ಸದಸ್ಯರು ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ ಇವರ ಉಪಸ್ಥಿತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಯಿತು.✍ವರದಿ:-ಉಲ್ಲಾಸ್...
ಯುವಜನ ಸಂಯುಕ್ತ ಮಂಡಳಿ(ರಿ.) ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಫೆಬ್ರವರಿ 13 ರಂದು ಮಂಡಳಿಯ ಆವರಣದಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕರು ಇದರ ಉಪಯೋಗವನ್ನು ಪಡಕೊಳ್ಳಬೇಕಾಗಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು ಇದರ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಫೆ. 10 ರಂದು ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ., ಯು.ಪಿ.ರಾಮಕೃಷ್ಣ ಹಾಗೂ...
ಗಡಿಬಿಡಿಯಲ್ಲಿ ಕೆಲಸ ಮಾಡುತ್ತಾ ಬೇಗ ಬೇಗ ಹೊರಟ ಸುಂದರಿಯನ್ನು ಮನೆಯ ಹೊಸ ಸೊಸೆ ಆಶಾ ಕುತೂಹಲದಿಂದ ಕೇಳಿದಳು, ಏನು ಭಾರೀ ಅರ್ಜೆಂಟ್ ಲ್ಲಿ ಹೊರಟಿದ್ದಿ? ಎತ್ಲಾಗಿ ಹೋಗಲಿಕ್ಕಿದೆ? ಅದು ಕುಂಞಕ್ಕ ನಾಳೆ 'ಕೆಡ್ಡಸ' ಅಲ್ಲವಾ ಹಾಗಾಗಿ ನನ್ನೆರಿಗೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಹಾ ಕೆಡ್ಡಸಾ ಅದೆಂತ ನಾನು ಕೇಳೆ ಇಲ್ವಲ್ಲಾ ಏನದು ? ಎಂಬ ಆಕೆಯ ಕುತೂಹಲದ ಪ್ರಶ್ನೆ ...