Ad Widget

ಅಯ್ಯನಕಟ್ಟೆ : ಕಾರು & ಬೈಕ್ ಅಪಘಾತ – ಗಾಯಗೊಂಡ ಬೈಕ್ ಸವಾರನ ಮೊಬೈಲ್ ಕಾಣೆ

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಫೆ.8 ರಂದು ಬೆಳ್ಳಾರೆ ಸಮೀಪ ಅಯ್ಯನಕಟ್ಟೆ ಎಂಬಲ್ಲಿ ನಡೆದಿದೆ. ಸವಾರ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ವೇಳೆ ಅವರ ಮೊಬೈಲ್ ಕಳೆದು ಹೋಗಿದೆ ಎಂದು ತಿಳಿದುಬಂದಿದೆ. ಬೈಕ್ ಸವಾರರು ಚೊಕ್ಕಾಡಿ ಯಿಂದ ನಿಂತಿಕಲ್ಲ್ ಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಅಯ್ಯನಕಟ್ಟೆ ತಿರುವಿನಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಬಂದ ಕಾರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬೈಕ್ ಸವಾರನ ಮೊಬೈಲ್ ಕಾಣೆಯಾಗಿದ್ದು, ಯಾರಿಗಾದರೂ ಮೊಬೈಲ್ ಸಿಕ್ಕಿದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಗೆ ಅಥವಾ ಮಯೂರ ಗೋಲ್ಡ್ ಪ್ಯಾಲೇಸ್ ನಿಂತಿಕಲ್ಲು ಗೆ ತಲುಪಿಸಬೇಕಾಗಿ ಮನೆಯವರು ತಿಳಿಸಿದ್ದಾರೆ. ಅಥವಾ ಈ ದೂರವಾಣಿ ಸಂಖ್ಯೆ ಗೆ ಮಾಹಿತಿ ನೀಡಬಹುದು. ಮೊ: 9980864996

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!