- Saturday
- April 19th, 2025

ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸತ್ಯಪ್ರಸಾದ್ ಪುಳಿಮಾರಡ್ಕ, ಜನಾರ್ದನ ಸುಬ್ಬ ಬೈರ, ಭುವನೇಶ್ವರಿ (ಸ್ವಾತಿ) ಮತ್ತು ಬಿಜೆಪಿ ಬೆಂಬಲಿಗರು ಅಭ್ಯರ್ಥಿಗಳ ಪರವಾಗಿ ಕೊನೆ ಕ್ಷಣದ ಮತಬೇಟೆ ನಡೆಸಿದರು.

ಕೊಲ್ಲಮೊಗ್ರ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಎಸ್.ಅಂಗಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮಾಧವ ಚಾಂತಾಳ, ಉದಯ ಕೊಪ್ಪಡ್ಕ, ಜಯಶ್ರೀ ಎಸ್. , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು (5ನೇ ವಾರ್ಡ್)ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್ ರವರೊಂದಿಗೆ ಬೆಂಬಲಿಗರು ಮತಯಾಚಿಸಿದರು.

ಮತದಾನ ಮಾಡಲು ಹಲವರು ಹೋಗದೇ ಇರುವ ಸಂದರ್ಭದಲ್ಲಿ ತೀರ ಬಡತನದಲ್ಲಿರುವ ಕಟ್ಟಿಗೆ ಆಯ್ದು ಹೋಟೆಲ್ ಗೆ ಮಾರಿ ಜೀವನ ಸಾಗಿಸುತ್ತಿರುವ ಈ ದಂಪತಿಗಳು ಎಲ್ಲರಿಗೆ ಮಾದರಿಯೆನಿಸಿದ್ದಾರೆ. ಕಣ್ಣು ಕಾಣದೇ ಇರುವ ಪತಿ ಗುರುವರನ್ನು ಕರೆದುಕೊಂಡು ಪ್ರತಿದಿನ ಕಟ್ಟಿಗೆ ಸಂಗ್ರಹಕ್ಕೆ ಹೋಗುವ ಪತ್ನಿ ಐತೆ ಕೂಡ ಮತದಾನಕ್ಕೆ ಜತೆಯಾಗಿ ಬಂದು ಮಾದರಿ ಮತದಾರರೆನಿಸಿಕೊಂಡರು.

ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರಾಧಾಕೃಷ್ಣ ಗೌಡ ಕೊರತ್ಯಡ್ಕ ಮತ್ತು ಬೆಂಬಲಿಗರನ್ನು ಎಸ್.ಎನ್. ಮನ್ಮಥ ಭೇಟಿ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಕೆಪಿಸಿಸಿ ಮಾಜಿ ಸದಸ್ಯ ಎಂ. ವೆಂಕಪ್ಪ ಗೌಡ ರವರು ಅರಂಬೂರು, ಅರಂತೋಡು, ಗೂನಡ್ಕ, ಸಂಪಾಜೆ, ಜಾಲ್ಸೂರು ಕನಕಮಜಲು ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜ.02 ರಿಂದ ಜ.12 ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದ್ದು ಗೊನೆ ಮುಹೂರ್ತ ಡಿ. 27 ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಶ್ರೀಮತಿ ಎಂ.ಮೀನಾಕ್ಷಿ ಗೌಡ,ಎ.ರಮೇಶ ಬೈಪಡಿತ್ತಾಯ, ಎನ್.ಎ.ರಾಮಚಂದ್ರ, ಎನ್.ಜಯಪ್ರಕಾಶ್...

All posts loaded
No more posts