- Friday
- April 18th, 2025

ಮೊಗ್ರ ಮತಗಟ್ಟೆ ಬಳಿ ಮತದಾನದ ಮುಗಿದ ಬಳಿಕ ಮತಗಟ್ಟೆ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಭಾರತ ತಂಡದ ಸದಸ್ಯರು ಭಾಗವಹಿಸಿದರು.

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾರ್ಣಕಜೆ ಮತ್ತು ಬೊಳ್ಳಾಜೆ ಬೂತ್ ಗಳಲ್ಲಿ ಸೌಹಾರ್ದ ವೇದಿಕೆ ಅಭ್ಯರ್ಥಿಗಳೊಂದಿಗೆ ಕಾರ್ಯಕರ್ತರು ಮತಯಾಚಿಸಿದರು.

ಸುಳ್ಯ ತಾಲೂಕಿನಲ್ಲಿ ಯಶಸ್ವಿ ಮತದಾನ ನಡೆದಿದ್ದು ಶೇ 80.54 ಮತದಾನ ದಾಖಲಾಗಿದೆ. ತಾಲೂಕಿನ ಎಲ್ಲಾ ಮತಗಟ್ಟೆಗಳಿಂದ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಪೆಟ್ಟಿಗೆ ಆಗಮನವಾಗುತ್ತಿದೆ. ಡಿಮಸ್ಟರಿಂಗ್ ಕೇಂದ್ರ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್ ಖುದ್ದಾಗಿ ಪರಿಶೀಲನೆ ಹಾಗೂ ಪೆಟ್ಟಿಗೆಗಳ ಸರಿಯಾಗಿ ಜೋಡಣೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.

ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ಶೇ 80.54 ಮತದಾನ ದಾಖಲಾಗಿದೆ. ಉತ್ತಮ ಫಲಿತಾಂಶ ದಾಖಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 89311 ಮತದಾರರಲ್ಲಿ 71934 ಮತ ಚಲಾವಣೆಯಾಗಿದೆ. 44418 ಪುರುಷ ಮತದಾರರಲ್ಲಿ 36186 ಹಾಗೂ 44893 ಮಹಿಳಾ ಮತದಾರರಲ್ಲಿ 35748 ಮತ ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ನ ಕುಂತೂರು ಎರಡನೇ ವಾರ್ಡ್ ನ ಬೂತ್ ಗೆ ಭೇಟಿ ಮಾಡಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಉಪಸ್ಥಿತರಿದ್ದರು.

All posts loaded
No more posts