Ad Widget

ಕಳಂಜ: ಬಿಜೆಪಿ ಬೆಂಬಲಿತ ಪ್ರಶಾಂತ್ ಕಿಲಂಗೋಡಿ, ಪ್ರೇಮಲತಾ‌ ಮಣಿಮಜಲು ಮತ್ತು ಬಾಲಕೃಷ್ಣ ಬೇರಿಕೆ ಗೆಲುವು

ಕಳಂಜ 1ನೇ‌ ವಾರ್ಡ್ ನಿಂದ ಬಿಜೆಪಿಯಿಂದ ಪ್ರಶಾಂತ್ ಕಿಲಂಗೋಡಿ 410, ಪ್ರೇಮಲತಾ ಮಣಿಮಜಲು 374, ಬಾಲಕೃಷ್ಣ ಬೇರಿಕೆ 359 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪಕ್ಷೇತರರಾದ ಶಾಂಭವಿ‌ 255 ಮತ ಗಳಿಸಿ ಪರಾಭವಗೊಂಡಿದ್ದಾರೆ.

ಆಲೆಟ್ಟಿ : ನಾಲ್ಕನೇ ವಾರ್ಡ್ ನಲ್ಲಿ 2 ಕಾಂಗ್ರೆಸ್ – 1 ಬಿಜೆಪಿ ಗೆಲುವು

ಆಲೆಟ್ಟಿ 4 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಮುತ್ತಪ್ಪ ಪೂಜಾರಿ 470, ಮೀನಾಕ್ಷಿ 379 ಹಾಗೂ ಬಿಜೆಪಿಯ ಕಮಲ 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅಚ್ವುತ 314, ರಾಜಲಕ್ಷ್ಮಿ 344, ಸರೋಜಿನಿ 329 ಮತ ಪಡೆದು ಸೋಲು ಕಂಡರು
Ad Widget

ಸಂಪಾಜೆ ಕಾಂಗ್ರೆಸ್ ಬೆಂಬಲಿತ ಸೋಮಶೇಖರ ಕೊಯಿಂಗಾಜೆ, ಲಸ್ಸಿ ಮೊನಾಲಿಸಾ ಗೆಲುವು

ಸಂಪಾಜೆ 1ನೇ ವಾರ್ಡ್ ನಿಂದ ಕಾಂಗ್ರೆಸ್ ನಿಂದ ಸೋಮಶೇಖರ ಕೊಯಿಂಗಾಜೆ 378, ಲಸ್ಸಿ ಮೊನಾಲಿಸಾ 302 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ವರದರಾಜ್ ಸಂಕೇಶ 337, ಮಾಲತಿ ರಾಜೇಶ್ ಬಿ 284 ಮತ ಪಡೆದು ಪರಾಭವಗೊಂಡಿದ್ದಾರೆ.

ಪೆರುವಾಜೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ, ಗುಲಾಬಿ , ಚಂದ್ರಾವತಿ ಗೆಲುವು

ಪೆರುವಾಜೆ 1 ನೇ ವಾರ್ಡ್ ನ 3 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ 458, ಗುಲಾಬಿ 367 , ಚಂದ್ರಾವತಿ 358 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಕೆ.ಎಂ.ಬಿ. 308, ಮಂಜುಳ 304, ವನಿತಾ 292 ಮತ ಪಡೆದ ಸೋಲು ಕಂಡಿದ್ದಾರೆ.

ಮರ್ಕಂಜ : ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ ಗೆಲುವು

ಮರ್ಕಂಜ 1 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ 453 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಾಂತ್ 229, ಕಾಂಗ್ರೆಸ್ ನ ಜಯರಾಮ 113 ಮತ ಪಡೆದು ಪರಾಭವಗೊಂಡರು. ಬಿಜೆಪಿಯ ಗೀತಾ ಬಳ್ಳಕ್ಕಾನ 206 ಮತ ಪಡೆದು ಜಯಗಳಿಸಿದರು.‌ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಮುನಾ 49 ಮತ ಪಡೆದು...

ಬೆಳ್ಳಾರೆ : ಬಿಜೆಪಿಯ ಚಂದ್ರಶೇಖರ ಪನ್ನೆ, ನಮಿತಾ ಕೆ.ಎಲ್ ಗೆಲುವು

ಬೆಳ್ಳಾರೆ 4ನೇ ವಾರ್ಡ್ ನ ಬಿಜೆಪಿಯ ಚಂದ್ರಶೇಖರ ಪನ್ನೆ 323, ನಮಿತಾ ಕೆ.ಎಲ್. 283 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ‌ನಾಗೇಶ್ ತಡಗಜೆ 173, ಲಲಿತಾ ಮೂಲ್ಯ 132, ಎಸ್ ಡಿ ಪಿ ಐ ನ ನೌಪಾಲ್ 93 ಮತ ಪಡೆದು ಸೋಲು ಕಂಡರು.

ಮಂಡೆಕೋಲು: ಬಿಜೆಪಿಯ ಅನಿಲ್ ತೋಟಪ್ಪಾಡಿ, ಪ್ರತಿಮಾ ಹೆಬ್ಬಾರ್ ಗೆಲುವು

ಮಂಡೆಕೋಲು 1 ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಬಿಜೆಪಿಯ ಅನಿಲ್ ತೋಟಪ್ಪಾಡಿ 338 ಹಾಗೂ ಪ್ರತಿಮಾ ಹೆಬ್ಬಾರ್ 322 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಶುಭಕರ ಬೊಳುಗಲ್ಲು 244, ರಶ್ಮಿ ಚೇರದಮೂಲೆ 161ಮತ ಪಡೆದು ಸೋಲು ಕಂಡಿದ್ದಾರೆ.

ಅಜ್ಜಾವರ : ಬಿಜೆಪಿಯ ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು ಗೆಲುವು

ಅಜ್ಜಾವರ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಗಳಾದ ರವಿರಾಜ್ ಕರ್ಲಪ್ಪಾಡಿ 327, ದಿವ್ಯ ಜಯರಾಮ ಪಡ್ಡಂಬೈಲು 270 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ನ ಮಿಥುನ್ ಕರ್ಲಪ್ಪಾಡಿ 188, ಪವಿತ್ರ ಲೋಕೇಶ್ ಮುಡೂರು 179 ಮತ ಪಡೆದು ಸೋಲು ಕಂಡರು

ಕೂತ್ಕುಂಜ : ಬಿಜೆಪಿಯ ನೇತ್ರಾವತಿ ಗೆಲುವು

ಕೂತ್ಕುಂಜ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ನೇತ್ರಾವತಿ ಕಲ್ಲಾಜೆ, 310 ಮತ ಗಳಿಸಿ ವಿಜಯಿಯಾಗಿದ್ದಾರೆ. ಭವ್ಯ ಕುದ್ವ 133 ಮತ ಪಡೆದರೇ 9 ಮತ ತಿರಸ್ಕೃತ ವಾಗಿದೆ.

ಐವರ್ನಾಡು : ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ ಗೆಲುವು – ಬಿಜೆಪಿಗರಿಗೆ ಸೋಲು

ಐವರ್ನಾಡು ಗ್ರಾಮದ 5 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ 223 ಮತ ಪಡೆದು ಗೆಲುವು ಸಾಧಿಸಿದ್ದಾರೆ.ಬಿಜೆಪಿ ಬೂತ್ ಸಮಿತಿ ಹಾಗೂ ಮಂಡಲ ಸಮಿತಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಆ ಮೂಲಕ ಬಿಜೆಪಿಗರಿಗೆ ಮತದಾ ರ ಬುದ್ಧಿ ಕಲಿಸಿದ್ದಾರೆ.
Loading posts...

All posts loaded

No more posts

error: Content is protected !!