Ad Widget

ಕಳಂಜ : ತಂಟೆಪ್ಪಾಡಿಯಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ

ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ 'ನಿನಾದ ಸಾಂಸ್ಕೃತಿಕ ಕೇಂದ್ರ'ವು ರೂಪುಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಡಿ.05 ರಂದು ಜರುಗಿತು. ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ...

ಪ್ಲಾಸ್ಟಿಕ್ ಮುಕ್ತ ಗ್ರಾಮ ಮಡಪ್ಪಾಡಿ ಕಾರ್ಯಕ್ರಮಕ್ಕೆ ಚಾಲನೆ – ಪ್ಲಾಸ್ಟಿಕ್ ಸಂಗ್ರಹಿಸಿ ತಂದವರಿಗೆ ಪ್ರತಿಯಾಗಿ ಅಕ್ಕಿ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಡಪ್ಪಾಡಿ ಗ್ರಾಮ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ‌ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಅಭಿಯಾನಕ್ಕೆ ಡಿ.5 ರಂದು ಚಾಲನೆ...
Ad Widget

ಐವರ್ನಾಡು : ಆತ್ರೇಯ ಕ್ಲಿನಿಕ್ ಶುಭಾರಂಭ

ಐವರ್ನಾಡಿನ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಡಾ| ಪ್ರಿಯಾಂಕ ನಾಟಿಕೇರಿಯವರ ಆತ್ರೇಯ ಕ್ಲಿನಿಕ್ ಡಿ. 05 ರಂದು ಶುಭಾರಂಭಗೊಂಡಿತು.ಡಾ| ಪ್ರಿಯಾಂಕ ನಾಟಿಕೇರಿಯವರ ತಂದೆ ಶ್ರೀ ಜಯಪ್ರಸಾದ್ ನಾಟಿಕೇರಿ ಹಾಗೂ ತಾಯಿ ಶ್ರೀಮತಿ ಸ್ವರಾಜ್ಯಲಕ್ಷ್ಮೀಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಡ್ತಿಲ ಕಾಂಪ್ಲೆಕ್ಸ್ ಮಾಲಕರಾದ ಶ್ರೀ ಸತೀಶ್ ಮಡ್ತಿಲ ಹಾಗೂ ಶ್ರೀಮತಿ ಮಮತಾ ಮಡ್ತಿಲ, ನರಸಿಂಹ ಭಟ್...

ಕಲ್ಮಕಾರು ಶಾಲಾ ಮುಖ್ಯ ಶಿಕ್ಷಕಿ ಬೊಳಿಯಮ್ಮ ಡಿ ನಿವೃತ್ತಿ

ಕಲ್ಮಕಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಶ್ರೀಮತಿ‌ ಬೊಳಿಯಮ್ಮ ಡಿ. ನವಂಬರ್ 30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಪೋಷಕರ ಮೆಚ್ಚುಗೆ ಗಳಿಸಿದ್ದರು. 1982 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಭೂತಕಲ್ಲು, ಮೈತಡ್ಕ, ದೇವಚಳ್ಳ,...

ಅಮರ ಸುಳ್ಯ ಪಿಕಪ್, ಟೆಂಪೋ, ಲಾರಿ ಚಾಲಕ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಜಯರಾಮ ಪಿ.ಜಿ.

ಸುಳ್ಯದ ಗಾಂಧಿನಗರ ಪಾರ್ಕಿಂಗ್ ನಲ್ಲಿ ಪಿಕಪ್, ಟೆಂಪೋ, ಲಾರಿ ಚಾಲಕ ಮಾಲಕರ ಸಂಘದ ಮಹಾಸಭೆಯು ನ್ಯಾಯವಾದಿ ಹರೀಶ್ ಬೂಡುಪನ್ನೆಯವರ ಅಧ್ಯಕ್ಷತೆಯಲ್ಲಿ ನ.23 ರಂದು ನಡೆಯಿತು. ನಂತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಗೌರವಾಧ್ಯಕ್ಷರಾಗಿ ಕೆ.ಪುರುಷೋತ್ತಮ, ಅಧ್ಯಕ್ಷರಾಗಿ ಜಯರಾಮ ಪಿ.ಜಿ, ಉಪಾಧ್ಯಕ್ಷರಾಗಿ ರವಿ.ಟಿ.ವಿ, ಪ್ರಧಾನ ಕಾರ್ಯದರ್ಶಿ ನಝೀರ್ ಶಾಂತಿನಗರ, ಜತೆ ಕಾರ್ಯದರ್ಶಿ ಎ.ವಿ ಸತೀಶ್, ಕೋಶಾಧಿಕಾರಿ...

ಹರಿಹರ ಪಲ್ಲತ್ತಡ್ಕ : ಕಲ್ಲೆಮಠ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ – ಸಂಚಾರಕ್ಕೆ ಮುಕ್ತ

ಹರಿಹರ ಪಲ್ಲತ್ತಡ್ಕ ಗ್ರಾಮದ ಬಾಳುಗೋಡು ರಸ್ತೆಯ ಕಲ್ಲೆಮಠ ಎಂಬಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಡಿಸೆಂಬರ್ 3 ರಿಂದ ಸಂಚಾರಕ್ಕೆ ಮುಕ್ತವಾಗಿದೆ. ✍ವರದಿ:-ಉಲ್ಲಾಸ್ ಕಜ್ಜೋಡಿ

ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿಟ್ಟಿ ಬಿ.ನೆಡುನಿಲಂ – ಉಪಾಧ್ಯಕ್ಷರಾಗಿ ಜಾನ್ ವಿಲಿಯಂ ಲಸ್ರಾದೋ

ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು ಇಂದು ಅಧ್ಯಕ್ಷ ಉಪಾಧ್ಯಕ್ಷರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಯಾಗಿ ಮಂಗಳೂರಿನ ಉಪ ನೋಂದಾವಣಾ ಅಧಿಕಾರಿ ಗೋಪಾಲ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ಅಧ್ಯಕ್ಷ ರಾಗಿ ಬಿಟ್ಟಿ ಬಿ ನೆಡುನಿಲಂ ಮತ್ತು ಉಪಾಧ್ಯಕ್ಷ ರಾಗಿ ಜಾನ್ ವಿಲಿಯಂ ಲಸ್ರಾದೋ...

ಸಾಮಾಜಿಕ ಮುಂದಾಳು, ಪ್ರಗತಿಪರ ಕೃಷಿಕ ವಸಂತ್ ಭಟ್ ತೊಡಿಕಾನ ನಿಧನ

ತೊಡಿಕಾನ ಗ್ರಾಮದ ದೊಡ್ಡಡ್ಕ ನಿವಾಸಿ ಉರಿಮಜಲು ವಸಂತ ಭಟ್ (70) ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಸಾಮಾಜಿಕ ಕಳಕಳಿ ಹೊಂದಿದ ಅವರು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೃಷಿ ವಿಷಯದಲ್ಲಿ ಪದವಿ ಪದವಿಧರರಾದ ಅವರು ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಗೆ ಹಳದಿ ರೋಗ ಬಾಧಿಸಿದ್ದು ಇದಕ್ಕೆ ಪರ್ಯಾಯ ಬೆಳೆಯಾಗಿ ತಾಳೆಕೃಷಿಯನ್ನು ಪರಿಚಯಿಸಿಕೊಟ್ಟು ಅನೇಕರನ್ನು...

ತಂಟೆಪ್ಪಾಡಿಯಲ್ಲಿ ನಿನಾದ ಉದ್ಘಾಟನೆ ಪ್ರಯುಕ್ತ ಪೂರ್ವಭಾವಿ ಪತ್ರಿಕಾಗೋಷ್ಠಿ

ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳತ್ವದಲ್ಲಿ 'ನಿನಾದ' ಸಾಂಸ್ಕೃತಿಕ ಕಲಾ ಕೇಂದ್ರದ ಉದ್ಘಾಟನೆ ಮತ್ತು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಕಾಲಮಿತಿ ಯಕ್ಷಗಾನ ಮಾನಿಷಾದ ಡಿ. 05 ರಂದು ಸಂಜೆ ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಕಲಾಕೇಂದ್ರದಲ್ಲಿ ನಡೆಯಲಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿಯು ಡಿ.04ರಂದು ನಿನಾದದಲ್ಲಿ ನಡೆಯಿತು....

ಶುಭವಿವಾಹ : ಪ್ರದೀಪ್ – ಕವಿತಾ

ಸುಳ್ಯ ತಾಲೂಕು ಕಳಂಜ ಗ್ರಾಮದ ಶ್ರೀ ವೆಂಕಟರಮಣ ಆಚಾರ್ಯರ ಪುತ್ರ ಪ್ರದೀಪ್ ರವರ ವಿವಾಹವು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕೋಡಿಕಜೆ ಶ್ರೀ ಸುಕುಮಾರ ಆಚಾರ್ಯರ ಪುತ್ರಿ ಕವಿತಾರೊಂದಿಗೆ ನ.30 ರಂದು ಸುಬ್ರಹ್ಮಣ್ಯದ ಸ್ಕಂದ ಕಲ್ಯಾಣ ಮಂಟಪದಲ್ಲಿ ನಡೆಯಿತು. ಡಿ.01 ರಂದು ಆರತಕ್ಷತೆ ಕಾರ್ಯಕ್ರಮವು ಕಳಂಜದ ವರನ ಮನೆಯಲ್ಲಿ ಜರುಗಿತು.
Loading posts...

All posts loaded

No more posts

error: Content is protected !!