Ad Widget

ಸುಳ್ಯ : ನವೋದಯ ಚೈತನ್ಯ ವಿಮಾ ಚೆಕ್‌ ವಿತರಣೆ

ಡಿಸೆಂಬರ್ 14 ರಂದು ಸುಳ್ಯ ಸಿ ಎ ಬ್ಯಾಂಕ್ ನಲ್ಲಿರುವ ಸತ್ಯಶ್ರೀ ನವೋದಯ ಸ್ವ ಸಹಾಯ ಸಂಘ ಕಲ್ಲಗುಡ್ಡೆ ಅಜ್ಜಾವರ ಇದರ ಸದಸ್ಯೆ ಶ್ರೀಮತಿ ಬೇಬಿ ಯವರಿಗೆ ಚೈತನ್ಯ ವಿಮಾ ಚೆಕ್‌ ನ್ನು ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಿತರಿಸಿದರು. ಈ ಸಂದರ್ಭದಲ್ಲಿ ಸುಳ್ಯ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಸಂಘದ ಅಧ್ಯಕ್ಷೆ ಶ್ರೀಮತಿ...

ದೊಡ್ಡತೋಟ ಶಾಲೆಯಲ್ಲಿ ಶ್ರಮದಾನ

ದೊಡ್ಡತೋಟ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಯಸ್.ಡಿ.ಯಂ.ಸಿ. ಮತ್ತು ವಿಪತ್ತು ನಿರ್ವಹಣಾ ಘಟಕ ಹಾಗೂ ಹಿರಿಯ ವಿದ್ಯಾರ್ಥಿಸಂಘ ಮತ್ತು ವಿದ್ಯಾರ್ಥಿ ಪೋಷಕರಿಂದ ಶಾಲೆಯ ಮೈದಾನ, ಶಾಲಾ ಆವರಣವನ್ನು ಶ್ರಮದಾನದ ಮೂಲಕ ಡಿ.13 ಸ್ವಚ್ಛಗೊಳಿಸಲಾಯಿತು.
Ad Widget

ಜಬಳೆ : ತೋಡಿಗೆ ಬಿದ್ದ ಸ್ಕೂಟಿ – ಸವಾರನಿಗೆ ಗಾಯ

ಎಲಿಮಲೆ ಸಮೀಪ ದೊಡ್ಡತೋಟ ಕಡೆಯಿಂದ ಎಲಿಮಲೆ ಕಡೆಗೆ ತೆರಳುತ್ತಿದ್ದ ಸ್ಕೂಟಿ ಚಾಲಕನ ನಿಯಂತ್ರಣ ತಪ್ಪಿ ಜಬಳೆ ಯಲಿರುವ ತೋಡಿಗೆ ಉರುಳಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸವಾರ ಬೊಮ್ಮಾರಿನವರಾಗಿದ್ದು ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಸಾವಿತ್ರಿ ಕಣೆಮರಡ್ಕ ರಿಗೆ ಪಡುಮಲೆ ಯಶಸ್ವಿ ಸಾಧನಾ ಪ್ರಶಸ್ತಿ

ದೇವಚಳ್ಳ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿಯಾಗಿರುವ ಸಾವಿತ್ರಿ ಕಣೆಮರಡ್ಕ ತನ್ನ ವೃತ್ತಿ ಸಾಧನೆ ಗುರುತಿಸಿ ರಾಜ್ಯ ಸರಕಾರ ಸಿಬ್ಬಂದಿ ಸೇವಾ ಪುರಸ್ಕಾರ ನೀಡಿ ಗೌರವಿಸಿತ್ತು. ಇದೀಗ ಇವರ ಈ ಸಾಧನೆಗೆ ಮತ್ತೊಂದು ಕಿರೀಟ ಲಭಿಸಿದ್ದು ಉಡುಪಿಯ ಯಶಸ್ವಿ ನಾಗರಿಕಾ ಸೇವಾ ಸಂಘದ ವತಿಯಿಂದ ಪಡುಮಲೆ ಯಶಸ್ವಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ. ತಾ.ಪ.ಸುಳ್ಯ , ಗ್ರಾಮ ಪಂಚಾಯತ್...

ಕುಕ್ಕೆ‌ ಸುಬ್ರಹ್ಕಣ್ಯ ಷಷ್ಠಿ ಹಿನ್ನೆಲೆ ಡಿ.17 ರಿಂದ 20 ರವರೆಗೆ ಅಂತರ್ ಜಿಲ್ಲೆ, ಅಂತರ್ ರಾಜ್ಯದ ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧ – ಮುಂಗಡ ಕಾದಿರಿಸಿದವರಿಗೆ ಮಾತ್ರ ಅವಕಾಶ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಭಕ್ತರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಗಡ ನೊಂದಾಯಿಸಿರುವ ಭಕ್ತಾದಿಗಳನ್ನು ಹೊರತುಪಡಿಸಿ ಡಿಸೆಂಬರ್ 17 ರಿಂದ ನಾಲ್ಕು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ರಥಬೀದಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಥೋತ್ಸವ...

ಸುಳ್ಯ : ವೆಂಕಟರಮಣ ಸೊಸೈಟಿಯ ಕ್ಯಾಲೆಂಡರ್ ‌ಬಿಡುಗಡೆ

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯವರ 2021 ನೇ ವರ್ಷದ ಕ್ಯಾಲೆಂಡರ್ ನ್ನು ಡಿ.14 ರಂದು ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ಚಂದ್ರಾಕೋಲ್ಚಾರ್, ಪಿ.ಎಸ್. ಗಂಗಾಧರ, ಕೆ.ಸಿ ನಾರಾಯಣ ಗೌಡ, ಸದಾನಂದ ಕೆ.ಸಿ, ದಾಮೋದರ ನಾರ್ಕೋಡು, ಹೇಮಚಂದ್ರ ಕದಿಕಡ್ಕ, ದಿನೇಶ್...

ಮಡಪ್ಪಾಡಿ ಸೊಸೈಟಿ ಮಹಾಸಭೆ – ಸದಸ್ಯರಿಗೆ ಶೇ 8 ಡಿವಿಡೆಂಡ್ ಘೋಷಣೆ- ವಿದ್ಯಾರ್ಥಿ ವೇತನ ವಿತರಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ 13 ರಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ವಾರ್ಷಿಕ ಕಾರ್ಯನಿರ್ವಹಣಾ ವರದಿ ಮತ್ತು ಕಾರ್ಯಸೂಚಿಗಳನ್ನು ಮಂಡಿಸಿದ ಅಧ್ಯಕ್ಷರು ನಮ್ಮ ಸಂಘವು ಈ ಆರ್ಥಿಕ ವರ್ಷದಲ್ಲಿ ವಾರ್ಷಿಕ 22,79,672.90...

ಎಲಿಮಲೆ : ಸೈಕಲ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ – ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು – ಆರೋಪಿ ಅನಿಲ್ ಅಂಬೆಕಲ್ಲು ಪೋಲೀಸ್ ವಶ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಆರೋಪಿಯ ಬಂಧನವಾಗಿದೆ ಎಂದು ತಿಳಿದುಬಂದಿದೆ. ಎಂಟು ವರ್ಷದ ಬಾಲಕಿಗೆ ಸೈಕಲ್ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮನೆಯವರಿಗೆ ಗೊತ್ತಾಗಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದರೆನ್ನಲಾಗಿದೆ. ಶಾಲೆಯಿಂದ ಆತನನ್ನು...

ಡಿ.16 : ಅಜಪಿಲ ದೇವಸ್ಥಾನದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಸಿರುಕಾಣಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಚಂಪಾ ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆಯು ಡಿ.16ರಂದು ಹೊರಡಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಹೊರೆಕಾಣಿಕೆಗೆ ಹೊರೆಕಾಣಿಕೆ ನೀಡುವವರು ಡಿ.15 ರಂದು ಅಜಪಿಲ ದೇವಸ್ಥಾನಕ್ಕೆ ತಂದೊಪ್ಪಿಸಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ತಿಳಿಸಿದ್ದಾರೆ.

ಸುಬ್ರಹ್ಮಣ್ಯ : ಯುವ ಬ್ರಿಗೇಡ್ ವತಿಯಿಂದ ಸ್ವಚ್ಛತಾ ಕಾರ್ಯ

ಯುವ ಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರಿಂದ ಡಿ 13 ರಂದು ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಕುಮಾರಧಾರ ನದಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸೂರ್ಯ ಭಟ್, ರಮೇಶ್ ಭಟ್, ಅಶ್ವಥ್ ಕೊನಡ್ಕ, ಮನೋಜ್ ದೇವರಗದ್ದೆ, ಅವನೀಶ್ ಭಟ್, ರತನ್ , ಅಭಿಷೇಕ್, ಕಾರ್ತಿಕ್ ರಾವ್, ನಾಗೇಶ್ ಮಣಿಯಾನ...
Loading posts...

All posts loaded

No more posts

error: Content is protected !!