Ad Widget

ಐವರ್ನಾಡು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಗೆ ದೇರಾಜೆ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವಿಪ್ರಸಾದ್ ಎಸ್.ಎನ್ ಮತ್ತು ಬಾಂಜಿಕೋಡಿ ವಾರ್ಡ್ ನಿಂದ ರಂಜನ್ ಮೂಲೆತೋಟ, ನಿಡುಬೆ ವಾರ್ಡ್ ನಿಂದ ಚಂದ್ರಕಲಾ ಜಬಳೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ಗೆ ಸುಳ್ಯದ ವಿದ್ಯಾರ್ಥಿಗಳು

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ (ರಿ) ನಡೆಸುವ 40ನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ - 2020 ಡಿಸೆಂಬರ್ 16 ರಿಂದ 25 ರ ತನಕ ನಡೆಯಲಿದೆ. ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಅವನಿ ಎಂ.ಎಸ್. ಸುಳ್ಯ, ಶರತ್ ಮರ್ಗಿಲಡ್ಕ, ಅಧಿತಿ...
Ad Widget

ಐವರ್ನಾಡು : ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ್ ಎಡಮಲೆ ನಾಮಪತ್ರ

ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ್ ಎಡಮಲೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಡಿ.16 : ಅರೆಬಾಸೆ ಕಿರುಚಿತ್ರ ಕೋಲ ಬಿಡುಗಡೆ

ಹವಿನ್ ಗುಂಡ್ಯ ನಿರ್ದೇಶನದ ಕೋಲ ತಂಡದಿಂದ ನಿರ್ಮಾಣಗೊಂಡ ಅರೆಬಾಸೆ ಕಿರುಚಿತ್ರ "ಕೋಲ" ಡಿಸೆಂಬರ್ 16 ರಂದು ಬಿಡುಗಡೆ ಮತ್ತು ಪ್ರದರ್ಶನಗೊಳ್ಳಲಿದೆ. ಜ್ಯೋತಿ ಸರ್ಕಲ್ ನ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಕಳಂಜ : ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕಳಂಜ ಗ್ರಾಮ ಪಂಚಾಯಿತಿನ ಪಕ್ಷೇತರ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. 1ನೇ ವಾರ್ಡಿನಿಂದ ಜಮಾಲ್ ಮಣಿಮಜಲು ಮತ್ತು ಅನಿಲ್ ಕುಮಾರ್ ಮಣಿಮಜಲು ಹಾಗೂ 2ನೇ ವಾರ್ಡಿನಿಂದ ಹೈದರಾಲಿ ಕಳಂಜ ಮತ್ತು ಲಕ್ಷ್ಮೀನಾರಾಯಣ ಕಳಂಜ ನಾಮಪತ್ರ ಸಲ್ಲಿಸಿದರು.

ಸ್ಥಳೀಯ ಮುಖಂಡರು ಹಾಗೂ ನ.ಪಂ.ಮಾಜಿ ಅಧ್ಯಕ್ಷರು ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ – ಸುಳ್ಯ ನಗರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟ ಅಧ್ಯಕ್ಷ ವಿನಯಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ಈಗಾಗಲೇ ಆಯ್ಕೆಗೊಂಡಿರುವ ವಿನಯ ಕುಮಾರ್ ಕಂದಡ್ಕ ರವರು ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಸುಳ್ಯ ತಾಲೂಕು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದರು.ಅದೇ ರೀತಿ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳೊಂದಿಗೆ ನಗರದ ಅಭಿವೃದ್ಧಿ...

ಕೊಲ್ಲಮೊಗ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾಗಿ ಐವರು ನಾಮಪತ್ರ ಸಲ್ಲಿಸಿದ್ದು, 1 ನೇ ವಾರ್ಡ್ ನಿಂದ ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ , ಉದಯ ಶಿವಾಲ, ಮೋಹಿನಿ ಕಟ್ಟಮೈಲ, ಶುಭಲತ ಕಟ್ಟ ಗೋವಿಂದನಗರ, 2 ನೇ ವಾರ್ಡ್ ನಿಂದ ಜಯಶ್ರೀ ಎಸ್. ಚಾಂತಾಳ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಕೊಲ್ಲಮೊಗ್ರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರು ಗ್ರಾ.ಪಂ. ಗೆ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಡಿ.12 ರಂದು ನಾಮಪತ್ರ ಸಲ್ಲಿಸಿದ್ದಾರೆ.ಕೊಲ್ಲಮೊಗ್ರು ವಾರ್ಡ್ 1 ರಿಂದ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನದಿಂದ ಕಾಂಗ್ರೆಸ್‌ನ ಶಶಿಕಲಾ ಚಾಳೆಪ್ಪಾಡಿ, ಅ.ಜಾ.ಮಹಿಳೆಗೆ ಕಾಂಗ್ರೆಸ್‌ನ ಕುಮುದಾ ಕೊಳಗೆ, ಸಾಮಾನ್ಯದಿಂದ ಕಾಂಗ್ರೆಸ್‌ನ ಶೇಖರ ಅಂಬೆಕಲ್ಲು ಹಾಗೂ ಕಮಲಾಕ್ಷ ಪೆರ್ನಾಜೆ, ವಾರ್ಡ್ 2 ರಿಂದ ಹಿ.ವ. ಎ ಯಿಂದ ಕಾಂಗ್ರೆಸ್‌ನ...

ಕೊಲ್ಲಮೊಗ್ರ : ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಶ್ರೀ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರ 2 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಾಂತಾಳ ಶಿವರಾಮ ರವರ ಪತ್ನಿ ಶ್ರೀಮತಿ ಜಯಶ್ರೀ ಎಸ್. ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಪೈಂಬೆಚ್ಚಾಲು ಎಸ್ಸೆಸ್ಸೆಫ್ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಆಸಿಫ್ ಕೆ.ಎಂ.ಪುನರಾಯ್ಕೆ

ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖೆ ಯ ವಾರ್ಷಿಕ ಮಹಾಸಭೆ ಯು, ಡಿಸೆಂಬರ್ ೧೨ ರಂದು, ಬಿಜೆಎಂ ವಠಾರದಲ್ಲಿ ಶಾಖಾಧ್ಯಕ್ಷರಾದ ಆಸಿಫ್ ಕೆ. ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸ್ಥಳೀಯ ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಿ, ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸದರ್ ಉಸ್ತಾದ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಟಿಎಎಚ್ ಸಅದಿ...
Loading posts...

All posts loaded

No more posts

error: Content is protected !!