Ad Widget

ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ

ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಇಂದು (ಡಿ.20) ವಿಶೇಷ ಪೂಜೆ ನಡೆಯಿತು.ಪೂರ್ವಾಹ್ನ ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ, ಶತರುದ್ರಾಭಿಷೇಕ, ಪಲ್ಲಪೂಜೆ, ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ಜರುಗಿತು. ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ದೊಡ್ಡತೋಟ : ಸಂಜೀವಿನಿ ಕ್ಲಿನಿಕ್ ಶುಭಾರಂಭ

ದೊಡ್ಡತೋಟ ಮುಖ್ಯರಸ್ತೆಯ ಬ್ಯಾಂಕ್ ಆಫ್ ಬರೋಡ ಶಾಖೆಯ ಬಳಿ ಡಾ.ಜೀವನ್ ಎಸ್ ರವರ ಸಂಜೀವಿನಿ ಕ್ಲಿನಿಕ್ ಡಿ.18 ರಂದು ಶುಭಾರಂಭಗೊಂಡಿತು.ಸುಳ್ಯ ಕೃಷ್ಣ ಕ್ಲಿನಿಕ್ ನ ಡಾ.ಕೇಶವ ಪಿ.ಕೆ.ಕ್ಲಿನಿಕ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಜ್ಯೋತಿ ಆಸ್ಪತ್ರೆಯ ಡಾ.ಜಯಪ್ರಸಾದ್ ಪಾರೆ,ಶ್ರೀಮತಿ ಸರಸ್ವತಿ ಎಸ್.ಭಟ್.ಸಂಕಹಿತ್ತಿಲು, ಉಮೇಶ್ ಎಸ್, ಶ್ರೀಮತಿ ಆಶಾ ಕುಮಾರಿ ಕೆ.ಎಂ ಹಾಗೂ ಗಣ್ಯರು...
Ad Widget

ಡಿ.21 (ನಾಳೆ) : ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳದ ರಂಗಪ್ರವೇಶ

ಪುತ್ತೂರು - ಕಡಬ ತಾಲೂಕಿನ ಏಕೈಕ ಮಹಿಳಾ ಸಿಂಗಾರಿ ಮೇಳವಾಗಿ ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳವು ಡಿ.21 (ನಾಳೆ)ರಂದು ಸಂಜೆ ಗಂಟೆ 7.30 ಕ್ಕೆ ಚಾರ್ವಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಂಗಪ್ರವೇಶಿಸಲಿದೆ.ಅತಿಥಿ ಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ರಂಗಪ್ರವೇಶ ಜರುಗಲಿದೆ ಎಂದು ಸಿಂಗಾರಿ ಮೇಳದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಎಂ.ಬಿ. ಸೀತಾರಾಮ ಗೌಡ ಅವಿರೋಧ ಆಯ್ಕೆ

ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಅಲೆಕ್ಕಾಡಿ ಇದರ ನೂತನ ಉಪಾಧ್ಯಕ್ಷರ ಚುನಾವಣೆಯು ಡಿ.20 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ಸಂಘದ ನೂತನ ಉಪಾಧ್ಯಕ್ಷರಾಗಿ ಎಂ.ಬಿ. ಸೀತಾರಾಮ ಗೌಡರವರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಬಿ.ನಾಗೇಂದ್ರ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ವಿ.ಎಸ್.ಎಸ್.ಎನ್ ನ ನಿರ್ದೇಶಕರಾದ ವಸಂತ ನಡುಬೈಲು, ಮುರುಳ್ಯ ಹಾಲು...

ಸುಳ್ಯ : ನೂತನ ತಹಶೀಲ್ದಾರ್ ವೇದವ್ಯಾಸ ಮುತಾಲಿಕ್ ಇಂದು ಅಧಿಕಾರ ಸ್ವೀಕಾರ

ಸುಳ್ಯ ನೂತನ ತಹಶೀಲ್ದಾರರಾಗಿ ವೇದವ್ಯಾಸ ಮುತಾಲಿಕ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್ ಹಾಗೂ ತಾಲೂಕು ಕಚೇರಿ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ವಾರದ ಹಿಂದೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಅನಿತಾಲಕ್ಷ್ಮಿ ರವರು ಪುನಃ ಬಂಟ್ವಾಳಕ್ಕೆ ವರ್ಗಾವಣೆಗೊಂಡು ತೆರವುಗೊಂಡ ಸ್ಥಾನಕ್ಕೆ...

ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗಧಾಧರ ಬಾಳುಗೋಡು, ಪ್ರ. ಕಾರ್ಯದರ್ಶಿ ಸುಬ್ರಹ್ಮಣ್ಯ ಮಾವಂಜಿ

ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಬಳಗದ ಸಭೆ ಇಂದು ರೋಟರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿ ರಚನೆ ಹಾಗೂ ಖಾಸಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.ನೂತನ ಸಮಿತಿ ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು, ಉಪಾಧ್ಯಕ್ಷ ರಾಗಿ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ...

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ನ 276 ಸ್ಥಾನಗಳಿಗೆ 636 ಅಭ್ಯರ್ಥಿಗಳು : ಅರಂತೋಡು 5 , ಮರ್ಕಂಜ ಓರ್ವ ಸದಸ್ಯ ಅವಿರೋಧ ಆಯ್ಕೆ

ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಸುಳ್ಯ ತಾಲೂಕಿನಲ್ಲಿ ಒಟ್ಟು 636 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಾಮಪತ್ರ ಸಲ್ಲಿಕೆಗೆ ಡಿ.16 ಕೊನೆದಿನ ಅಂದಿನವರೆಗೆ ಒಟ್ಟು 851 ನಾಮಪತ್ರ ಸಲ್ಲಿಕೆಯಾಗಿತ್ತು. ಡಿ.17 ರಂದು ನಾಮಪತ್ರ ಪರಿಶೀಲನೆ ನಡೆದು 20 ನಾಮಪತ್ರ ಕ್ರಮಬದ್ಧವಾಗಿರದ ಹಿನ್ನೆಲೆಯಲ್ಲಿ ತಿರಸ್ಕೃತ ಗೊಂಡಿತ್ತು. ನಾಮಪತ್ರ ಹಿಂಪಡೆಯುವ ಅವಧಿ ಡಿ.19 ಕ್ಕೆ ಮುಕ್ತಾಯಗೊಂಡಾಗ...

ಫೆ.24, 2021 ರಂದು ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ – ಆಮಂತ್ರಣ ಬಿಡುಗಡೆ

ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಇದರ ಜೀರ್ಣೋದ್ಧಾರ ಕಾರ್ಯ ಮುಕ್ತಾಯ ಹಂತದಲ್ಲಿದ್ದು 2021 ಫೆಬ್ರವರಿ 24 ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ( ಡಿ.19 )ರಂದು ನಡೆಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ಭಟ್ ಪರಿಯಂಬಿ, ಆಡಳಿತ ಸಮಿತಿ ಅಧ್ಯಕ್ಷ ದಿನೇಶ್...

ಕೊಡಿಯಾಲ : ಶಾಲೆ ಹಾಗೂ ಅಂಗನವಾಡಿಗೆ ಸ್ಟೀಲ್ ಕಪಾಟು ಕೊಡುಗೆ

ದೇವರಕಾನ ಸ.ಉ.ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೀಲಾವತಿ. ಎ ಯವರು, ಸಹಶಿಕ್ಷಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ್ದ ಹಾಗೂ ತನ್ನೆರಡು ಮಕ್ಕಳನ್ನು ಎತ್ತಿ ಮುದ್ದಾಡಿದ ಕೊಡಿಯಾಲ ಸ.ಉ.ಹಿ.ಪ್ರಾ. ಶಾಲೆ ಹಾಗೂ ಬಾಚೋಡಿ ಕೊಡಿಯಾಲ ಅಂಗನವಾಡಿ ಕೇಂದ್ರಕ್ಕೆ ಸವಿನೆನಪಿನ ಕಾಣಿಕೆಯಾಗಿ ಸ್ಟೀಲ್ ಕಪಾಟುಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಲೀಲಾವತಿ.ಎ ಯವರ ಪುತ್ರ ಅಜಿತ್ ಜಿ,...

ಬಿಜೆಪಿ ಮಂಡಲ ಸಮಿತಿ ನಿರ್ಲಕ್ಷ್ಯ : ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಭಟ್ ಇಡ್ಯಡ್ಕ ರಾಜೀನಾಮೆ

ಗ್ರಾಮ ಪಂಚಾಯತ್ ಟಿಕೇಟ್ ಹಂಚಿಕೆಯಲ್ಲಿ ಮಂಡಲ ಸಮಿತಿ ಉಪಾಧ್ಯಕ್ಷರ ಮಾತನ್ನು ಕಡೆಗಣಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ನೀಡಿದ್ದಾರೆಂದು ಇದರಿಂದ ಬೇಸರಗೊಂಡು ಬಿಜೆಪಿ ಮಂಡಲ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಭಟ್ ಇಡ್ಯಡ್ಕ ರಾಜೀನಾಮೆ ನೀಡಿದ ಘಟನೆ ನಿನ್ನೆ ನಡೆದಿದೆ.ಕೊಲ್ಲಮೊಗ್ರ ಹರಿಹರ ಸೊಸೈಟಿ ಚುನಾವಣೆಯಲ್ಲಿ ಕಲ್ಮಕಾರು ಭಾಗದಿಂದ ಗಣೇಶ್ ಭಟ್ ಇಡ್ಯಡ್ಕ ಸ್ಪರ್ಧಿಸಿದ್ದರು. ಇವರ ವಿರುದ್ಧ...
Loading posts...

All posts loaded

No more posts

error: Content is protected !!