ಸುಳ್ಯ ತಾಲೂಕಿನಲ್ಲಿ 25 ಗ್ರಾಮ ಪಂಚಾಯತಿಗಳ ಫಲಿತಾಂಶ ಹೊರ ಬಂದಿದ್ದು 18 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು 5 ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, 2 ಕಡೆ ಬಿಜೆಪಿ ಬಂಡಾಯ ಅಧಿಕಾರಕ್ಕೆ ಏರಲಿದೆ. ಆಲೆಟ್ಟಿ,ಅಮರ ಮುಡ್ನೂರು,ಅರಂತೋಡು, ಬಾಳಿಲ,ಬೆಳ್ಳಾರೆ, ಗುತ್ತಿಗಾರು,ಹರಿಹರ ಪಲ್ಲತ್ತಡ್ಕ, ಜಾಲ್ಸೂರು,ಕಳಂಜ,ಕನಕಮಜಲು,ಕೊಡಿಯಾಲ,ಕೊಲ್ಲಮೊಗ್ರ,ಮಂಡೆಕೋಲು, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಪಂಜ,ಉಬರಡ್ಕ ಮಿತ್ತೂರು, ಮತ್ತು ಮುರುಳ್ಯ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದರೆ ಸಂಪಾಜೆ, ಅಜ್ಜಾವರ, ಮಡಪ್ಪಾಡಿ, ಕಲ್ಮಡ್ಕ, ಪೆರುವಾಜೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ. ಐವರ್ನಾಡು ಮತ್ತು ದೇವಚಳ್ಳ ಗ್ರಾ.ಪಂ.ನಲ್ಲಿ ಬಿಜೆಪಿ ಬಂಡಾಯ ತಂಡ ಅಧಿಕಾರಕ್ಕೆ ಏರಲಿದೆ
ಆಲೆಟ್ಟಿಯಲ್ಲಿ ಬಿಜೆಪಿ ಬೆಂಬಲಿತರು 13, ಕಾಂಗ್ರೆಸ್ ಬೆಂಬಲಿತರು 8, ಅಮರ ಮುಡ್ನೂರು ಬಿಜೆಪಿ ಬೆಂಬಲಿತರು 11, ಕಾಂಗ್ರೆಸ್ ಬೆಂಬಲಿತರು 4,ಬಿಜೆಪಿ ಬಂಡಾಯ 2,
ಅರಂತೋಡು ಬಿಜೆಪಿ ಬೆಂಬಲಿತರು 11, ಕಾಂಗ್ರೆಸ್ ಬೆಂಬಲಿತರು 2, ಬಿಜೆಪಿ ಬಂಡಾಯ 2, ಬಾಳಿಲ ಬಿಜೆಪಿ ಬೆಂಬಲಿತರು 9, ಕಾಂಗ್ರೆಸ್ ಬೆಂಬಲಿತರು 1, ಬೆಳ್ಳಾರೆ ಬಿಜೆಪಿ ಬೆಂಬಲಿತರು 8, ಕಾಂಗ್ರೆಸ್ ಬೆಂಬಲಿತರು 4, ಎಸ್ ಡಿಪಿಐ ಬೆಂಬಲಿತರು 2, ಗುತ್ತಿಗಾರು ಬಿಜೆಪಿ ಬೆಂಬಲಿತರು 13, ಗ್ರಾಮ ಭಾರತ ತಂಡ 4,ಹರಿಹರ ಪಲ್ಲತ್ತಡ್ಕ ಬಿಜೆಪಿ ಬೆಂಬಲಿತರು 5, ಕಾಂಗ್ರೆಸ್ ಬೆಂಬಲಿತರು1, ಜಾಲ್ಸೂರು ಬಿಜೆಪಿ ಬೆಂಬಲಿತರು 11, ಕಾಂಗ್ರೆಸ್ ಬೆಂಬಲಿತರು 3, ಬಿಜೆಪಿ ಬಂಡಾಯ 3, ಕಳಂಜ ಬಿಜೆಪಿ ಬೆಂಬಲಿತರು ಎಲ್ಲಾ 6 ಸ್ಥಾನ, ಕನಕಮಜಲು ಬಿಜೆಪಿ ಬೆಂಬಲಿತರು 5, ಕಾಂಗ್ರೆಸ್ ಬೆಂಬಲಿತರು 2,ಕೊಡಿಯಾಲ ಬಿಜೆಪಿ ಬೆಂಬಲಿತರು 4 ಕಾಂಗ್ರೆಸ್ ಬೆಂಬಲಿತರು 2, ಕೊಲ್ಲಮೊಗ್ರ ಬಿಜೆಪಿ ಬೆಂಬಲಿತರು ಎಲ್ಲಾ 8 ಸ್ಥಾನ, ಮಂಡೆಕೋಲು ಬಿಜೆಪಿ ಬೆಂಬಲಿತರು 14, ಕಾಂಗ್ರೆಸ್ ಬೆಂಬಲಿತರು 1,
ಮರ್ಕಂಜ ಬಿಜೆಪಿ ಬೆಂಬಲಿತರು 7, ಕಾಂಗ್ರೆಸ್ ಬೆಂಬಲಿತರು1, ಬಂಡಾಯ1,ನೆಲ್ಲೂರು ಕೆಮ್ರಾಜೆ ಬಿಜೆಪಿ ಬೆಂಬಲಿತರು 6, ಕಾಂಗ್ರೆಸ್ ಬೆಂಬಲಿತರು 2, ಪಂಜ ಬಿಜೆಪಿ ಬೆಂಬಲಿತರು 10, ಕಾಂಗ್ರೆಸ್ ಬೆಂಬಲಿತರು 3,
ಉಬರಡ್ಕ ಮಿತ್ತೂರು ಬಿಜೆಪಿ ಬೆಂಬಲಿತರು 5, ಕಾಂಗ್ರೆಸ್ ಬೆಂಬಲಿತರು 4, ಮುರುಳ್ಯ ಬಿಜೆಪಿ ಬೆಂಬಲಿತರು ಎಲ್ಲಾ 7 ಸ್ಥಾನ,ಸಂಪಾಜೆ ಕಾಂಗ್ರೆಸ್ ಬೆಂಬಲಿತರು 13, ಬಿಜೆಪಿ ಬೆಂಬಲಿಗರು 1,ಅಜ್ಜಾವರ ಕಾಂಗ್ರೆಸ್ ಬೆಂಬಲಿತರು 10, ಬಿಜೆಪಿ ಬೆಂಬಲಿಗರು 5, ಪಕ್ಷೇತರರು 3,
ಮಡಪ್ಪಾಡಿ ಕಾಂಗ್ರೆಸ್ ಬೆಂಬಲಿತರು 4, ಬಿಜೆಪಿ ಬೆಂಬಲಿಗರು 1,ಕಲ್ಮಡ್ಕ ಕಾಂಗ್ರೆಸ್ ಬೆಂಬಲಿತ ಪಕ್ಷೇತರರು ಎಲ್ಲಾ 9 ಸ್ಥಾನ,
ಪೆರುವಾಜೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು 5, ಬಿಜೆಪಿ ಬೆಂಬಲಿಗರು 3, ಐವರ್ನಾಡು ಗ್ರಾ.ಪಂ.ನಲ್ಲಿ ಬಿಜೆಪಿ ಬಂಡಾಯ ಬಳಗ 12, ಪಕ್ಷೇತರ 1 ಸ್ಥಾನ , ದೇವಚಳ್ಳ ಬಿಜೆಪಿ ಬಂಡಾಯ 5 ಮತ್ತು ಬಿಜೆಪಿ 4 ,ಕಾಂಗ್ರೆಸ್ 1 ಸ್ಥಾನ ಪಡೆದುಕೊಂಡಿದೆ.
- Wednesday
- December 4th, 2024