Ad Widget

ಎಸ್ ಎಂ ಎ ಸುಳ್ಯ ರೀಜನಲ್ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸುಳ್ಯ ರೀಜನಲ್ ಇದರ ವತಿಯಿಂದ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020 ಕಾರ್ಯಕ್ರಮ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಮದರಸ ಸಭಾಂಗಣದಲ್ಲಿ ಡಿ.29 ರಂದು ನಡೆಯಿತು. ಎಸ್ ಎಂ ಎ ಜಿಲ್ಲಾ ಈಸ್ಟ್ ಎಲೆಕ್ಷನ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಾದತ್ ತಂಙಳ್ ಕರುವೇಲು ಕಾರ್ಯಕ್ರಮ ಉದ್ಘಾಟಿಸಿದರು. ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಸಖಾಫಿ ರಿಪಾಯಿ ಅನುಸ್ಮರಣೆ ಪ್ರಭಾಷಣ ಮಾಡಿ ದುವಾ ನೆರವೇರಿಸಿದರು.

. . . . . . . . .


ಎಸ್ ಎಂ ಎ ಜಿಲ್ಲಾಧ್ಯಕ್ಷ ಹಮೀದ್ ಹಾಜಿ ಕೊಡುಂಗೈ ಕಾರ್ಯಾಗಾರ ನಡೆಸಿಕೊಟ್ಟರು. ಸುಳ್ಯ ರೀಜನಲ್ ಅಧ್ಯಕ್ಷ ಯೂಸುಫ್ ಹಾಜಿ ಬಿಳಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಈಸ್ಟ್ ಸಮಿತಿ ಚುನಾವಣಾ ಘಟಕ ಮುಖ್ಯ ನಿರ್ದೇಶಕ ಅಬ್ದುಲ್ಲಾ ಅಹ್ಸನಿ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಯತ್ ಸುಳ್ಯ ತಾಲೂಕು ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ,ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಕೆ.ಎಂ ಮುಸ್ತಫಾ, ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ,ಸುಳ್ಯ ತಾಲೂಕು ಸಂಯುಕ್ತ ಜಮಾಯತ್ ಅಧ್ಯಕ್ಷ ಹಾಜಿ ಅಬ್ದುಲ್‌ ಸಮದ್,ಪಳ್ಳಿಕುಂಞಿ ಹಾಜಿ ಶಾಂತಿನಗರ,ಮೊಯ್ಯಿದೀನ್ ಹಾಜಿ ಶಾಂತಿನಗರ, ಲತೀಫ್ ಸಖಾಫಿ ಮಾಡನ್ನೂರು,ಇಬ್ರಾಹಿಂ ಸಖಾಫಿ ಪುಂಡೂರ್,ಅಬ್ದುಲ್ಲಾ ಹಾಜಿ ಜಯನಗರ, ಅಬೂಭಕ್ಕರ್ ಕೆ ಎ ಜಟ್ಟಿಪಳ್ಳ, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೀಜನಲ್ ಸಮಿತಿ ಯ ಎಲೆಕ್ಷನ್ ಕಮಿಟಿ ಚೆಯರ್ಮೆನ್ ಆಗಿ ಇಬ್ರಾಹಿಂ ಸಖಾಫಿ ಪುಂಡೂರ್, ಮುಖ್ಯ ನಿರ್ದೇಶಕರಾಗಿ ಅಬ್ದುಲ್ಲ್ ಹಮೀದ್ ಬೀಜಕೊಚ್ಚಿ ,ಸದಸ್ಯರುಗಳಾಗಿ ಮುಹ್ಯದ್ದೀನ್ ಪ್ಯಾನ್ಸಿ,ನಿಜಾರ್ ಸಖಾಫಿ ಮುಡೂರ್,ಮಜೀದ್ ಸುಣ್ಣಮೂಲೆ ಇವರನ್ನು ನೇಮಕ ಮಾಡಿ ಗುರುತಿನ ಚೀಟಿ ಮತ್ತು ದಾಖಲೆಪತ್ರಗಳನ್ನು ಹಸ್ತಾಂತರಿಸಲಾಯಿತು. ಸುಳ್ಯ ರೀಜನಲ್ ಪ್ರ.ಕಾರ್ಯದರ್ಶಿ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಹಸೈನಾರ್ ಜಯನಗರ, ಬೆಳ್ಳಾರೆ ರೀಜನಲ್ ಸದಸ್ಯ ಹಸೈನಾರ್ ವಳಲಂಬೆ ಸಹಕರಿಸಿದರು. ನಿಜಾರ್ ಸಖಾಫಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ರಿಜಿನಲ್ ವ್ಯಾಪ್ತಿಯ ಎಲ್ಲಾ ಮೊಹಲ್ಲಾಗಳ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading