Ad Widget

ಕಾನಾವುಜಾಲು : ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಪೆರುವಾಜೆ ಗ್ರಾಮದ ಕಾನಾವುಜಾಲಿನಲ್ಲಿ ಧರ್ಮದೈವ, ಪಿಲಿಭೂತ, ಶಿರಾಡಿದೈವ ಹಾಗೂ ಉಪದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಭಿಷೇಕ ಡಿ.28 ರಂದು ವೇ.ಮೂ. ಪಂಜ‌ ನಾರಾಯಣ ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಿತು.
ಡಿ.21 ರಿಂದ‌ ಡಿ.28 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಪವಮಾನ ಹೋಮ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸೋಮವಾರ ಬೆಳಗ್ಗೆ ಧರ್ಮದೈವ,ಪಿಲಿಭೂತ, ಶಿರಾಡಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಾನಾವುಜಾಲು ವಿಠಲ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!