ಬೆಳ್ಳಾರೆ ಗ್ರಾಮದ ಉಮಿಕ್ಕಳ ( ಕೊಳಂಬಳ) ಶ್ರೀ ನಾಗರಾಜ ಕ್ಷೇತ್ರದಲ್ಲಿ ದೇರೆಬೈಲು ತಂತ್ರಿ ಮುಕ್ಕೂರು ಶ್ರೀ ಪತಂಜಲಿ ಶಾಸ್ತ್ರಿಯವರ ನೇತೃತ್ವದಲ್ಲಿ ನಾಗದೇವರಾದ ನಾಗವೀಣಾ ಬ್ರಹ್ಮ,ನಾಗಕನ್ನಿಕೆ,ಸಂತಾನ ನಾಗ, ನಾಗರಾಜ ಹಾಗೂ ನಾಗ ಚಾಮುಂಡಿಯ ಪ್ರತಿಷ್ಠೆ ಮತ್ತು ಕಲಶಾಭಿಷೇಕವು ಡಿ.28 ರಂದು ನಡೆಯಿತು. ಡಿ.27 ರಂದು ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ,ಸಪ್ತಶುದ್ದಿ,ಪ್ರಾಸಾದ ಶುದ್ಧಿ,ಭೂವರಾಹ ಹೋಮ,ಮಹಾಗಣಪತಿ ಹೋಮ, ಸಾಯಂಕಾಲ ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಪೂಜೆ, ದಿಕ್ಪಾಲಕ ಬಲಿ, ದುರ್ಗಾನಮಸ್ಕಾರ ಪೂಜೆ,ನಾಗದೇವರ ಮತ್ತು ನಾಗಚಾಮುಂಡಿ ಬಿಂಬಗಳ ಶುದ್ಧಿ,ಅಧಿವಾಸ ಹೋಮ,ಬಿಂಬ ದಾನ್ಯಾಧಿವಾಸ ನಡೆಯಿತು. ಡಿ.28 ರಂದು ಸ್ವಸ್ತಿ ಪುಣ್ಯಾಹವಾಚನ, ಕಲಶಪೂಜೆ, ಗಣಪತಿ ಹೋಮ,ಪ್ರತಿಷ್ಠಾ ಹೋಮ,ನಾಗದೇವರ ಮತ್ತು ನಾಗ ಚಾಮುಂಡಿಯ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಆಶ್ಲೇಷಾಬಲಿ, ವಟುಆರಾಧನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮುರಳೀಧರ ಕೆಮ್ಮಾರ, ಅಧ್ಯಕ್ಷ ದಿವಾಕರ ರೈ ಮರಿಕೇಯಿ, ಕಾರ್ಯದರ್ಶಿ ವಿಶ್ಬನಾಥ ಕೆ, ಕೋಶಾಧಿಕಾರಿ ವಿಠಲದಾಸ್ ಎನ್.ಎಸ್.ಡಿ, ಉಪಾಧ್ಯಕ್ಷ ಪ್ರದೀಪ್ ರೈ ಅಜ್ರಂಗಳ, ಸದಸ್ಯರಾದ ಶಶಿಧರ ಬಿ.ಕೆ, ಹೊನ್ನಪ್ಪ ಕೆ, ವಸಂತ ಬೋರ್ಕರ್, ಸಂಪ್ರೀತ ಪ್ರಭು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Saturday
- November 23rd, 2024