

ಕೊರೋನಾ ಸಂಕಷ್ಟ ಕಾಲದಲ್ಲಿ ಸುಳ್ಯದಿಂದ ಹೊರರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳಲು ಕೂಲಿ ಕಾರ್ಮಿಕರಿಗೆ, ಹಾಗೂ ಪ್ರಯಾಣಿಕರಿಗೆ ಸರಕಾರದ ನಿರ್ದೇಶನದ ಮೇರೆಗೆ ಬಸ್ ಸೌಲಭ್ಯವನ್ನು ಸೂಕ್ತ ಸಮಯಕ್ಕೆ ಒದಗಿಸಿ ಕರ್ತವ್ಯ ನಿಷ್ಠೆ ಮೆರೆದ ಸುಳ್ಯ ಘಟಕದ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್ ಸುಂದರ್ ರಾಜ್ ರವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಿಸೆಂಬರ್ 28ರಂದು ಟ್ರಸ್ಟ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಿಯಾಜ್ ಕಟ್ಟೆ ಕಾರ್ಸ್ ರವರು ತಾಲೂಕಿನ ವಿಕಲಚೇತನರ ಬಸ್ ಪಾಸನ್ನು ಆಯ ಘಟಕಗಳಲ್ಲಿ ವಿತರಿಸಿ ಸಹಕರಿಸುವಂತೆ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಸಂಚಾರ ನಿರೀಕ್ಷಕ ಕರುಣಾಕರ, ಸ್ಥಳೀಯರಾದ ಸಿದ್ದೀಕ್, ಮರ್ಝೂಕ್, ಶಿಹಾಬ್ ಶಮಾಲ್ ಮೊದಲಾದವರು ಉಪಸ್ಥಿತರಿದ್ದರು.