


ಸುಳ್ಯ ತಾಲೂಕಿನಲ್ಲಿ ಯಶಸ್ವಿ ಮತದಾನ ನಡೆದಿದ್ದು ಶೇ 80.54 ಮತದಾನ ದಾಖಲಾಗಿದೆ. ತಾಲೂಕಿನ ಎಲ್ಲಾ ಮತಗಟ್ಟೆಗಳಿಂದ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಪೆಟ್ಟಿಗೆ ಆಗಮನವಾಗುತ್ತಿದೆ. ಡಿಮಸ್ಟರಿಂಗ್ ಕೇಂದ್ರ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್ ಖುದ್ದಾಗಿ ಪರಿಶೀಲನೆ ಹಾಗೂ ಪೆಟ್ಟಿಗೆಗಳ ಸರಿಯಾಗಿ ಜೋಡಣೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.