

ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ನಾಲ್ಕನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಏಜೆಂಟರ ಬಳಿ ಹೆಚ್ಚು ಜನ ಕುಳಿತುಕೊಳ್ಳಲು ಅವಕಾಶ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮತದಾರರು ಚುನಾವಣಾ ಕೇಂದ್ರದ ಒಳಗಡೆ ಏಜೆಂಟರ ಬಳಿ ಹೋಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.