ರಾಷ್ಟ್ರೀಯ ಕ್ರೀಡಾಪಟು, ಉದ್ದ ಜಿಗಿತ , ಓಟ , ಮುಂತಾದ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಕೀರ್ತಿ ತಂದ ಸಂಶೀರ್ ಜಯನಗರ ರವರಿಗೆ ಯೋನೆಕ್ಸ್ ಶಟಲ್ ಬ್ಯಾಡ್ಮಿಂಟನ್ ಕ್ಲಬ್. ರಿ. ಸುಳ್ಯ ವತಿಯಿಂದ ಡಿಸೆಂಬರ್ 25ರಂದು ಸುಳ್ಯ ಕುರುಂಜಿಗುಡ್ಡೆ ಒಳ ಕ್ರೀಡಾಂಗಣದಲ್ಲಿ ನಡೆದ ಯೋನೆಕ್ಸ್ ಡೇ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಹತ್ತು ತಿಂಗಳುಗಳಿಂದ ಕೋವಿಡ್ 19 ರ ಹಿನ್ನೆಲೆಯಲ್ಲಿ ಅವರು ಸುಳ್ಯದಲ್ಲಿ ಇದ್ದು ನಿರಂತರವಾಗಿ ಸುಳ್ಯದ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಕ್ರೀಡಾಪಟುಗಳಿಗೆ ದೈಹಿಕ ತರಬೇತಿಯನ್ನು ನೀಡುತ್ತಿದ್ದು , ಕ್ರೀಡಾ ಸ್ಪೂರ್ತಿಯನ್ನು ನೀಡುತ್ತಿದ್ದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಅಕ್ಷಯ್ ಕೆ ಸಿ, ಯೋನೆಕ್ಸ್ ಕ್ಲಬ್ ಅಧ್ಯಕ್ಷ ಮನೋಜ್ ಕುಮಾರ್, ಕ್ಲಬ್ ಸದಸ್ಯರುಗಳಾದ ರಿಜ್ವಾನ್ ಜನತಾ, ವಿಜಯಪ್ರಕಾಶ್, ಹೇಮಂತ್ ಅರಂಬೂರು, ಸಫ್ವಾನ್ ಜನತಾ, ಗುರುವಿಕ್ರಂ ಸಂತೃಪ್ತಿ, ನಾಸಿರ್ ಕಟ್ಟೆಕಾರ್ಸ್, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚೇತನ್, ರವಿಕಿರಣ್, ಸಂಶುದ್ದೀನ್ ಜಯನಗರ ,ಕಬೀರ್ ಕಟ್ಟೆಕಾರ್, ಪ್ರೀತಮ್ ಅಕ್ಷತಾ, ರಿಫಾಯಿ ಪೈಚಾರ್, ಮಹೇಶ್, ಯಾಕೂಬ್ ಎಸ್ಟಿ ಟ್ರೇಡರ್ಸ್, ಮೊದಲಾದವರು ಸಹಕರಿಸಿದರು. ಗುರು ವಿಕ್ರಂ ಕಾರ್ಯಕ್ರಮ ನಿರೂಪಿಸಿ, ರಂಜಿತ್ ಎನ್ಆರ್ ಸ್ವಾಗತಿಸಿ ವಂದಿಸಿದರು.
- Thursday
- November 21st, 2024