
ಸುಳ್ಯ ರಥಬೀದಿಯಲ್ಲಿ ಕಾರ್ಯಚರಿಸುತ್ತಿರುವ ಶಾಫಿ ಕುತ್ತಮೊಟ್ಟೆರವರ ಮಾಲಕತ್ವದ ತಾಹಿರಾ ಫ್ಯಾಬ್ರಿಕ್ಸ್ ವತಿಯಿಂದ ನಡೆದ ದೀಪಾವಳಿ ಹಬ್ಬದ ವಿಶೇಷ ಕೊಡುಗೆ ಕೂಪನ್ ವಿಜೇತರಿಗೆ ಇಂದು ಬಹುಮಾನ ವಿತರಣೆ ನಡೆಯಿತು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ ರೈ , ನ ಪಂ ಸದಸ್ಯೆ ಕಿಶೋರಿ ಶೇಟ್, ನ ಪಂ ಮಾಜಿ ಸದಸ್ಯ ಹಾಜಿ ಮುಸ್ತಪ ಜನತಾ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವನ್ನು ಜಯನಗರ ನಿವಾಸಿ ಜಯರಾಮ ಪಡೆದುಕೊಂಡು, ದ್ವಿತೀಯ ಬಹುಮಾನವನ್ನು ಮೇನಾಲ ನಿವಾಸಿ ಕುಮಾರಿ ಜ್ಯೋತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜು ಪಂಡಿತ್, ಪತ್ರಕರ್ತ ಹಸೈನಾರ್ ಜಯನಗರ, ಕುಂಞಿರಾಮನ್ ವೈದ್ಯರ್, ಸಂಸ್ಥೆಯ ಹಿತೈಷಿ ಶಶಿಧರ ಎಂ ಜೆ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ ವಂದಿಸಿದರು.