
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ವಾರ್ಷಿಕ ಮಹಾಸಭೆಯು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಡಿ.22ರಂದು ಜರುಗಿತು.
ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಶೇ.1೦ ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ, ಸಂಘವು ವಾರ್ಷಿಕವಾಗಿ ೯೧ ಕೋಟಿಯ ೩೭ ಲಕ್ಷದ ೧೭ ಸಾವಿರದ ೨೪೫ ರೂ. ವ್ಯವಹಾರ ನಡೆಸಿದ್ದು, ೪೧, ೮೨, ೧೪೫ ರೂ. ಲಾಭಗಳಿಸಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಪಿ., ನಿರ್ದೇಶಕರುಗಳಾದ ಕರುಣಾಕರ ರೈ ಕುಕ್ಕಂದೂರು, ಶ್ರೀಮತಿ ಭಾರತಿ ಪಿ.ಕೆ., ಮಹೇಶ್ವರ ಎಸ್., ಶ್ರೀಮತಿ ಪ್ರೇಮಲತ ಪಲ್ಲತ್ತಡ್ಕ, ಶ್ರೀಕೃಷ್ಣ ಭಟ್ ನೆಡಿಲು, ಸೀತಾರಾಮ ಎಂ., ಗಣೇಶ್ ಅಂಬಾಡಿಮೂಲೆ, ಶೇಷಪ್ಪ ನಾಯ್ಕ ಕಜೆಗದ್ದೆ, ಶ್ರೀಮತಿ ಸಾವಿತ್ರಿ ಕಾರಿಂಜ, ಸುಖೇಶ್ ಅಡ್ಕಾರುಪದವು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.