



ಕೊಲ್ಲಮೊಗ್ರ ಗ್ರಾ.ಪಂ.ನ ಕಲ್ಮಕಾರು ಒಂದನೇ ವಾರ್ಡ್ ಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾಗಿ ನಾವು ನಾಮಪತ್ರ ಸಲ್ಲಿಸಿದ್ದೇವೆ ಎಂದು ಅಶ್ವಥ್ ಯಾಲದಾಳು, ಪುಷ್ಪರಾಜ್ ಪಡ್ಪು, ಶಿವಮ್ಮ ಮೈಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಲ್ಲಿ ಬಂಡಾಯ ಅಭ್ಯರ್ಥಿಯಾಗಿರುವ ಚಲನ್ ಕೊಪ್ಪಡ್ಕ ಮತದಾರರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಲಿನ ಭಯದಿಂದ ಮತದಾರರಿಗೆ ಹಂಚಿದ ಮಾದರಿ ಮತಪತ್ರದಲ್ಲಿ ತಾನು ಬಿಜೆಪಿ ಬೆಂಬಲಿತ ಎನ್ನುವಂತೆ ಮುದ್ರಿಸಿದ್ದಾರೆ. ಬಿಜೆಪಿಯ ಆಧಿಕೃತ ಅಭ್ಯರ್ಥಿಗಳಲ್ಲಿ ತಾನು ಒಬ್ಬ ಎನ್ನುವಂತೆ ಮತ್ತು ಬಿಜೆಪಿ ಬೆಂಬಲಿತರಾದ ಪುಷ್ಪರಾಜ್ ಪಡ್ಪು, ಶಿವಮ್ಮ ಮೈಲ ರವರ ಹೆಸರಿನ ಮುಂದೆ ಹಾಗೂ ತನ್ನ ಹೆಸರಿನ ಮುಂದೆ ಮಾತ್ರ ಚಿಹ್ನೆ ಮುದ್ರಿಸಿ, ಆಶ್ವಥ್ ಯಾಲದಾಳು ಹೆಸರಿನ ಮುಂದೆ ಚಿಹ್ನೆ ಮುದ್ರಿಸದೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸೋಲಿನ ಭಯದಲ್ಲಿ ಚಲನ್ ಕೊಪ್ಪಡ್ಕ ಅಡ್ಡದಾರಿ ಹಿಡಿಯಲು ಯತ್ನಿಸಿದ್ದಾರೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಂಡಲ ಸಮಿತಿಯವರನ್ನು ಪ್ರಶ್ನಿಸಿದಾಗ ಚಲನ್ ಕೊಪ್ಪಡ್ಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.