
ಚೊಕ್ಕಾಡಿ ಪ್ರಾ.ಕೖ.ಪ.ಸ.ಸಂಘದ ಮಹಾಸಭೆಯನ್ನು ಸಂಘದ ಅಧ್ಯಕ್ಷ ರಾಘವೇಂದ್ರ ಪುಳಿಮರಡ್ಕರ ಅಧ್ಯಕ್ಷತೆಯಲ್ಲಿ ಸಂಘದ ಅಮರ ಸಹಕಾರ ಸಭಾಭವನದಲ್ಲಿ ನಡೆಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೇಶವ ಕರ್ಮಜೆ, ನಿರ್ದೇಶಕರುಗಳಾದ ಸದಾಶಿವ ಮೂಕಮಲೆ, ಪ್ರವೀಣ್ ಎಸ್ ರಾವ್, ಶಿವರಾಮ್ ಕಾನಡ್ಕ ಸುರೇಶ್ ಡಿ. ಕೆ., ಪೂವ ಅಜಲ, ಶಿವಪ್ಪ ನಾಯ್ಕ , ಶ್ರೀಮತಿ ಮಧುಮತಿ ರಾಧಾಕೃಷ್ಣ ಶ್ರೀಮತಿ ಲತೇಶ್ವರ ಎಂ. ಎಸ್ ಗಣೇಶ ಪಿಲಿಕಜೆ , ಜಯದೀಪ್ ಚಿಲ್ಪಾರು, ಕೆ.ಎಸ್.ಜನಾರ್ಧನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಮೋಹನ್ ಕುಮಾರ್ ವರದಿ ವಾಚಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ರಾಘವೇಂದ್ರ ಪಿ.ಕೆ ಯವರು ಮಾತನಾಡಿ ಸಂಘವು ಪ್ರಸಕ್ತ ವರ್ಷದಲ್ಲಿ139 ಕೋಟಿ ವ್ಯವಹಾರ ನಡೆಸಿ, 18.93 ಲಕ್ಷ ಲಾಭ ಗಳಿಸಿರುತ್ತದೆ. ಸದಸ್ಯರಿಗೆ 2%ಡಿವಿಡೆಂಟ್ ವಿತರಿಸಲಾಗುವುದು ಎಂದು ಹೇಳಿದರು.