
ಕಲ್ಮಕಾರು ಮೂರನೇ ವಾರ್ಡ್ ನಿಂದ ನಾನು ಸ್ಪರ್ಧಿಸುತ್ತಿದ್ದು ನನಗೆ ಸೋಲಿನ ಭಯವಿಲ್ಲ, ಈಗ ಬಿಜೆಪಿ ಲೀಡರ್ ಗಳಿಗೆ ನಾನು ಸ್ಪರ್ಧಿಸಿರುವುದು ಭಯ ಬಂದು ಸ್ಪಷ್ಟನೆ ನೀಡುತ್ತಿದ್ದಾರೆ. ಕುತಂತ್ರ ಮಾಡಿದವರಿಗೆ, ವರಿಷ್ಠರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಂಡಲ ಸಮಿತಿ ಬೆಂಬಲ ನೀಡುತ್ತಿದೆ. ಪಕ್ಷದಲ್ಲಿ ಸರಿಯಾಗಿ ದುಡಿದ ಕಾರ್ಯಕರ್ತರಿಗೆ ಬೆಲೆ ಇಲ್ಲ. ನಾನು ಊರಿನ,ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ನಿಂತಿದ್ದೇನೆ. ನಾಯಕರು ಚುನಾವಣೆಗೆ ಮಾತ್ರ ಬರುವುದು, ಸ್ಥಳೀಯರ ಸಮಸ್ಯೆ ನಿವಾರಣೆಗೆ ಕಾರ್ಯಕರ್ತರೇ ಬರುವುದು. ಕೆಲ ವರಿಷ್ಠರು ಹಾಗೂ ಇಲ್ಲಿನ ಕೆಲವರು ಹಣ ಬಲ ಮತ್ತು ಕುತಂತ್ರದಿಂದ ಅವರು ಚುನಾವಣೆ ಗೆಲ್ಲಲೂ ಹೊರಟಿದ್ದಾರೆ. ಆದರೇ ಊರಿನ ಜನ ಅವರನ್ನು ತಿರಸ್ಕರಿಸಲು ಹೊರಟಿದ್ದಾರೆ ಎಂದು ಚಲನ್ ಕೊಪ್ಪಡ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.