
ಸುಳ್ಯ ನೂತನ ತಹಶೀಲ್ದಾರರಾಗಿ ವೇದವ್ಯಾಸ ಮುತಾಲಿಕ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್ ಹಾಗೂ ತಾಲೂಕು ಕಚೇರಿ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ವಾರದ ಹಿಂದೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಅನಿತಾಲಕ್ಷ್ಮಿ ರವರು ಪುನಃ ಬಂಟ್ವಾಳಕ್ಕೆ ವರ್ಗಾವಣೆಗೊಂಡು ತೆರವುಗೊಂಡ ಸ್ಥಾನಕ್ಕೆ ವೇದವ್ಯಾಸ ಮುತಾಲಿಕ್ ಆಗಮಿಸಿರುತ್ತಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಅನಿತಾಲಕ್ಷ್ಮಿ ರವರು ಮರು ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.