
ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಅಲೆಕ್ಕಾಡಿ ಇದರ ನೂತನ ಉಪಾಧ್ಯಕ್ಷರ ಚುನಾವಣೆಯು ಡಿ.20 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ಸಂಘದ ನೂತನ ಉಪಾಧ್ಯಕ್ಷರಾಗಿ ಎಂ.ಬಿ. ಸೀತಾರಾಮ ಗೌಡರವರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಬಿ.ನಾಗೇಂದ್ರ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ವಿ.ಎಸ್.ಎಸ್.ಎನ್ ನ ನಿರ್ದೇಶಕರಾದ ವಸಂತ ನಡುಬೈಲು, ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಯು, ನಿರ್ದೇಶಕರಾದ ಭುವನೇಶ್ವರ ಪಿ, ಶೂರಪ್ಪ. ಎ, ಬಾಲಕೃಷ್ಣ ಗೌಡ, ಹಿಮಕರ ರೈ, ಪ್ರೇಮಲತಾ ರೈ, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅಕ್ಷತಾ ಎ, ಸಂಘದ ಸಿಬ್ಬಂದಿ ಸುಂದರ. ಎ, ವಿಧೀಶ್ ರೈ, ದೀರೇಶ್ ನಡುಬೈಲು ಉಪಸ್ಥಿತರಿದ್ದು ನೂತನ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.