
ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಸುಳ್ಯ ತಾಲೂಕಿನಲ್ಲಿ ಒಟ್ಟು 636 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಡಿ.16 ಕೊನೆದಿನ ಅಂದಿನವರೆಗೆ ಒಟ್ಟು 851 ನಾಮಪತ್ರ ಸಲ್ಲಿಕೆಯಾಗಿತ್ತು. ಡಿ.17 ರಂದು ನಾಮಪತ್ರ ಪರಿಶೀಲನೆ ನಡೆದು 20 ನಾಮಪತ್ರ ಕ್ರಮಬದ್ಧವಾಗಿರದ ಹಿನ್ನೆಲೆಯಲ್ಲಿ ತಿರಸ್ಕೃತ ಗೊಂಡಿತ್ತು. ನಾಮಪತ್ರ ಹಿಂಪಡೆಯುವ ಅವಧಿ ಡಿ.19 ಕ್ಕೆ ಮುಕ್ತಾಯಗೊಂಡಾಗ ತಾಲೂಕಿನ 25 ಗ್ರಾಮ ಪಂಚಾಯತ್ ಗಳ 276 ಸ್ಥಾನಗಳಿಗೆ 636 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. 189 ನಾಮಪತ್ರಗಳು ಹಿಂಪಡೆದಿದ್ದಾರೆ. ಅರಂತೋಡಿನಲ್ಲಿ 5 ಮಂದಿ ಹಾಗು ಮರ್ಕಂಜದಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದೇ ಅಭ್ಯರ್ಥಿಗಳಿಗೆ ಚಿಹ್ನೆ ಕೂಡ ನೀಡಲಾಗಿದೆ. ಡಿ.27ರಂದು ಪಕ್ಷತೀತವಾಗಿ ನಡೆಯುವ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಬಳಸುವಂತಿಲ್ಲ.