Ad Widget

ಕೊಡಿಯಾಲ : ಶಾಲೆ ಹಾಗೂ ಅಂಗನವಾಡಿಗೆ ಸ್ಟೀಲ್ ಕಪಾಟು ಕೊಡುಗೆ

ದೇವರಕಾನ ಸ.ಉ.ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೀಲಾವತಿ. ಎ ಯವರು, ಸಹಶಿಕ್ಷಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ್ದ ಹಾಗೂ ತನ್ನೆರಡು ಮಕ್ಕಳನ್ನು ಎತ್ತಿ ಮುದ್ದಾಡಿದ ಕೊಡಿಯಾಲ ಸ.ಉ.ಹಿ.ಪ್ರಾ. ಶಾಲೆ ಹಾಗೂ ಬಾಚೋಡಿ ಕೊಡಿಯಾಲ ಅಂಗನವಾಡಿ ಕೇಂದ್ರಕ್ಕೆ ಸವಿನೆನಪಿನ ಕಾಣಿಕೆಯಾಗಿ ಸ್ಟೀಲ್ ಕಪಾಟುಗಳನ್ನು ಕೊಡುಗೆಯಾಗಿ ನೀಡಿದರು.

. . . . . . .


ಈ ಸಂದರ್ಭದಲ್ಲಿ ಶ್ರೀಮತಿ ಲೀಲಾವತಿ.ಎ ಯವರ ಪುತ್ರ ಅಜಿತ್ ಜಿ, ಸೊಸೆ ಶ್ರೀಮತಿ ಅಖಿಲಾ.ಕೆ.ಜೆ, ಪುತ್ರಿ ಶ್ರೀಮತಿ ಅಚಲಾ ಚೇತನ್ ಕಕ್ವೆ, ಮೊಮ್ಮಗಳು ಬೇಬಿ ಈಶಾನ್ವಿ ಕಕ್ವೆ, ಕೊಡಿಯಾಲ ಸ.ಉ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಸಿದ್ದರಾಜು, ಶಾಲೆಯ ಸ್ಥಳದಾನಿಗಳಾದ ವೆಂಕಟೇಶ.ಪೈ, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಶ್ರೀಮತಿ ಯಶೋದ, ಶ್ರೀಮತಿ ಕಮಲಮ್ಮ ಆರ್ವಾರ, ಶ್ರೀಮತಿ ವಾರಿಜಾ, ಯತೀಶ್ ಆರ್ವಾರ ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಸಂತಿ.ವಿ.ಪೈ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!