
ಸುಳ್ಯದ ಜೀವ ನದಿ ಪಯಸ್ವಿನಿಗೆ ಅರಂತೋಡು ತೊಡಿಕಾನ ಸಂಪರ್ಕ ಸೇತುವೆ ಯ ಸಮಾಜ ಕಂಟಕರು ಮೇಲಿಂದ ತಿಂದು ಉಳಿದ ಎಂಜಲು ಆಹಾರ,ಊಟಕ್ಕೆ ಬಳಸಿದ ಹಾಳೆ ತಟ್ಟೆ ಎಸೆದು ಅನಾಗರಿಕತೆ ಮೆರೆದಿದ್ದಾರೆ.
ಪಯಸ್ವಿನಿಗೆ ನದಿಗೆ ಸೇತುವೆ ಮೂಲಕ ನಿಂತು ತ್ಯಾಜ್ಯ ಎಂಜಲು ಆಹಾರ ಎಸೆದಿದ್ದಾರೆ.

ಈ ಸೇತುವೆಯ ಮೇಲೆ ಎಂಜಲು ಆಹಾರ ಚೆಲ್ಲಿ ದುರ್ವಾಸನೆ ಬೀರುತ್ತಿದೆ.ಇದರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೆರಳುವ ಭಕ್ತಾದಿಗಳಿಗೆ ಹಾಗೂ ಪ್ರಯಾಣಿಕರಿಗೆ ದರ್ವಾಸನೆ ಬಡಿತಯುತ್ತಿದೆ. ಪಯಸ್ವಿನಿ ನದಿಯನ್ನು ಸುಳ್ಯದ ಜೀವ ನದಿಯೆಂದು ಕರೆಯಲಾಗುತ್ತಿದೆ. ಈ ನದಿಯ ಕೆಳಭಾಗದಲ್ಲಿ ಸುಳ್ಯ ತಾಲೂಕಿನ ಗಡಿಭಾಗ ಪಂಜಿಕಲ್ಲು ತನಕವು ಈ ನದಿಯ ನೀರನ್ನು ಕುಡಿಯಲು ಬಳಸುತ್ತಾರೆ. ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ.ಇಷ್ಟೆಲ್ಲಾ ವಿಷಯ ಜನರಿಗೆ ತಿಳಿದಿದ್ದರೂ ಪಯಸ್ವಿನಿ ಹೊಳೆಗೆ ತ್ಯಾಜ್ಯ ಎಸೆದಿರುವುದು ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
