
ಎಲಿಮಲೆಯಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಾಲಾ ಆಡಳಿತಾಧಿಕಾರಿ ಅನಿಲ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಸಂದರ್ಭದಲ್ಲಿ ತನ್ನ ಹೆಸರು ಬಳಸಿ ಮಾನಹಾನಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶೈಲೇಶ್ ಅಂಬೆಕಲ್ಲು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ನನ್ನ ಮಾನಕ್ಕೆ ಹಾನಿಯಾಗುವ ರೀತಿಯಲ್ಲಿ ಒಂದು ವಾಕ್ಯ ಸಂದೇಶ ಹರಿದಾಡುತ್ತಿದ್ದು, ಈ ಸಂದೇಶದಲ್ಲಿ “ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಎಲಿಮಲೆ ಶಾಲೆಯ ಆಡಳಿತಾಧಿಕಾರಿ ಅನಿಲ್ (ಬಿಜೆಪಿ ಮುಖಂಡ ಶೈಲೇಶ್ ಅಂಬೆಕಲ್ಲು ರವರ ಸಂಬಂಧಿ) 6 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ಎಂಬಿತ್ಯಾದಿ ಒಕ್ಕಣೆಯಿರುವ ಶುದ್ಧ ಸುಳ್ಳು ಸಂದೇಶಗಳು ನನ್ನ ಬಗ್ಗೆ ಹರಿದಾಡುತ್ತಿದ್ದು, ಇದರಿಂದ ನಾನು ಮಾನಸಿಕವಾಗಿ ತುಂಬಾ ನೊಂದಿರುತ್ತೇನೆ. ಹಾಗೂ ಅನಿಲ್‌ನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ ಮತ್ತು ವಾಟ್ಸಪ್ ನಲ್ಲಿ ಬಂದಿರುವ ವಿಚಾರಕೂಡ ಸದ್ಯಕ್ಕೆ ದೂರವಾದ ವಿಚಾರವಾಗಿದ್ದು, ತಾನು ಬಾಲಕಿಯ ಪೋಷಕರಿಗೆ ದೂರು ನೀಡದಂತೆ ಒತ್ತಡ ಹಾಕಿಲ್ಲ, ಈ ಬಗ್ಗೆ ಯಾವುದೇ ಸತ್ಯ ಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ,ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಚುನಾವಣಾ ಸಮಯವಾದ್ದರಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಿ ಲಾಭ ಪಡೆಯುವ ಹುನ್ನಾರ ಎಂದು ಶೈಲೇಶ್ ಅಂಬೆಕಲ್ಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.