ಸುಳ್ಯ ನಗರದಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಫೋನ್ ಅಂಗಡಿಗಳ ಉದ್ಯಮಿಗಳು ಒಟ್ಟುಗೂಡಿ ಮಾರಾಟಗಾರರ ಸಮಸ್ಯೆಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ನೂತನವಾಗಿ ಅಸೋಶಿಯೇಶನ್ ಅನ್ನು ರಚಿಸಲಾಯಿತು. ನೂತನ ಸಮಿತಿ ರಚನಾ ಸಭೆಯು ಡಿಸೆಂಬರ್ 14ರಂದು ಬಾಳೆಮಕ್ಕಿ ದ್ವಾರಕಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಮ್ಮ ಸಂಘಟನೆಯ ಹಿತಾಶಕ್ತಿಗಳು ಮತ್ತು ಸಾಮಾಜಿಕವಾಗಿ ಜನ ಸ್ಪಂದನೆಯನ್ನು ರೂಪಿಸುವ ಕುರಿತು ಚರ್ಚೆ ಕಾರ್ಯಕ್ರಮ ನಡೆಯಿತು. ಸುಳ್ಯ ನಗರದಲ್ಲಿ ನೂರಕ್ಕೂ ಹೆಚ್ಚು ಮೊಬೈಲ್ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು ಕೆಲವು ಸಣ್ಣ ಪುಟ್ಟ ಸಂಸ್ಥೆಗಳು ಮೂಲಭೂತ ಸಮಸ್ಯೆಗಳಿಂದ ವಂಚಿತ ಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಿ ತಮ್ಮ ಸಹ ಸಂಸ್ಥೆಗಳಿಗೆ ಸಹಕಾರಿ ಆಗುವ ನಿಟ್ಟಿನ ಕೆಲಸ ಕಾರ್ಯಗಳನ್ನು ಒಗ್ಗಟ್ಟಿನಿಂದ ರೂಪಿಸಿ ಉತ್ತಮಗೊಳಿಸುವಲ್ಲಿ ಶ್ರಮಿಸುವ ಮೂಲಕ , ಮತ್ತು ಆನ್ಲೈನ್ ಮಾರಾಟದಿಂದ ಸಂಸ್ಥೆಗಳಿಗೆ ಆಗುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸೃಷ್ಟಿ ಮೊಬೈಲ್ ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ, ಪ್ರಧಾನ ಕಾರ್ಯದರ್ಶಿಯಾಗಿ ಕುರುಂಜಿ ಬಾಗಿನಲ್ಲಿ ಕಾರ್ಯಚರಿಸುತ್ತಿರುವ ಪಟೇಲ್ ಮೊಬೈಲ್ ಸಂಸ್ಥೆಯ ಮಾಲಕ ಅಬ್ದುಲ್ ರಹಿಮಾನ್ ಎಸ್ ವೈ, ಉಪಾಧ್ಯಕ್ಷರಾಗಿ ಒರ್ಕ್ಯೂಟ್ ಮೊಬೈಲ್ ಸಂಸ್ಥೆಯ ಮಾಲಕ ಶಬ್ಬೀರ್, ಜೊತೆ ಕಾರ್ಯದರ್ಶಿಯಾಗಳಾಗಿ ಸ್ವಸ್ತಿಕ್ ಮೊಬೈಲ್ ಸಂಸ್ಥೆಯ ಮಾಲಕ ಕಿರಣ್ ರಾಜ್, ಮತ್ತು ಕೂಲ್ ಮೊಬೈಲ್ ಸಂಸ್ಥೆಯ ಮಾಲಕ ಶಫೀಕ್ ಅವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ರಹಿಮಾನ್ ಎಸ್ ವೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.