ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖೆ ಯ ವಾರ್ಷಿಕ ಮಹಾಸಭೆ ಯು, ಡಿಸೆಂಬರ್ ೧೨ ರಂದು, ಬಿಜೆಎಂ ವಠಾರದಲ್ಲಿ ಶಾಖಾಧ್ಯಕ್ಷರಾದ ಆಸಿಫ್ ಕೆ. ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಿ, ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸದರ್ ಉಸ್ತಾದ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಟಿಎಎಚ್ ಸಅದಿ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿ ಸಂಘಟನಾ ತರಬೇತಿ ನೀಡಿದರು. ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ಶುಭಹಾರೈಸಿ ಮಾತನಾಡಿದರು.
ಪ್ರಸ್ತುತ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಆಸಿಫ್ ಕೆ. ಎಂ. ಉಪಾಧ್ಯಕ್ಷರಾಗಿ ನೌಶಾದ್ ಫಾಳಿಲಿ, ಕಬೀರ್ ಎನ್.ಎಂ. ಪ್ರಧಾನ ಕಾರ್ಯದರ್ಶಿಯಾಗಿ ಟಿಎಎಚ್ ಸಅದಿ, ಕಾರ್ಯದರ್ಶಿಯರಾಗಿ ಇರ್ಶಾದ್ ಕೆ.ಎ., ಆಬಿದ್ ಸಖಾಫಿ ಪಿ.ಎ., ಇಲ್ಯಾಸ್ ಹಿಮಮಿ ಕೆ. ಎ., ಕಮಾಲ್ ಸಿ., ಮುಹಮ್ಮದ್ ಕುಞಿ ಸಿ.ಎಚ್., ಸಾಬಿತ್ ಸಿ.ಪಿ. ಕೋಶಾಧಿಕಾರಿಯಾಗಿ ಶರೀಫ್ ಟಿ.ಎ. ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಖ್ ಹಿಮಮಿ ಸಖಾಫಿ, ಅನಸ್ ಪಿ.ಎಚ್., ಅಲಿ ಪಿ., ಅಬ್ದುಲ್ ಸಮದ್ ಪಿ.ಎಂ., ತಮೀಮ್ ಟಿ.ಐ., ಸವಾದ್ ಸಿ. ಯವರನ್ನು ಆಯ್ಕೆ ಮಾಡಲಾಯಿತು. ಸೆಕ್ಟರ್ ನಾಯಕರಾದ ಸ್ವಾದಿಖ್ ಪಿ.ಜೆ. ವೀಕ್ಷಕರಾಗಿ ಆಗಮಿಸಿದ್ದರು. ಸಭೆಯಲ್ಲಿ ಡಿವಿಷನ್ ನಾಯಕರಾದ ಸಿದ್ದೀಖ್ ಕಟ್ಟೆಕ್ಕಾರ್, ನೌಶಾದ್ ಕೆರೆಮೂಲೆ, ಹಾಗು ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರೂ ಕಾರ್ಯಕರ್ತರೂ ಭಾಗವಹಿಸಿದ್ದರು.
ಸಿದ್ದೀಖ್ ಹಿಮಮಿ ಸಖಾಫಿ ನಿರೂಪಿಸಿ, ಟಿಎಎಚ್ ಸಅದಿ ಸ್ವಾಗತಿಸಿ, ಧನ್ಯವಾದ ವಿತ್ತರು.