
ಗುತ್ತಿಗಾರು ಗ್ರಾಮದ ಲಿಂಗಪ್ಪ ಗೌಡ ಪೈಲೂರುರವರ ಪುತ್ರಿ ಯಶಸ್ವಿನಿ ಇಂದು ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಈಕೆ ಗುತ್ತಿಗಾರಿನ ಕುರಿಯಾಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಈಕೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳೆಂದು ತಿಳಿದುಬಂದಿದೆ. ಮೃತಳು ತಂದೆ, ತಾಯಿ ದಮಯಂತಿ, ಸಹೋದರಿ
ವೃಂದಶ್ರೀ ಅಗಲಿದ್ದಾರೆ.