ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿಯ ಮಹಾಸಭೆಯು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಸ್ಥಾಪಕಾದ್ಯಕ್ಷ ನರಸಿಂಹ ಟೈಲರ್ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ಟಿ. ದಿವಾಕರ ಜಾಲ್ಸೂರು ವಹಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹ ಟೈಲರ್, ಜಯಂತ್ ಉರ್ಲಾಂಡಿ, ಮಾತನಾಡಿ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಾರ್ಡನ್ನು ನಮ್ಮ ಟೈಲರ್ ಭವನದಲ್ಲಿಯೇ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು. ನಾವು ಹೊರಾಟ ಮಾಡಿ ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸರಕಾರದಿಂದ ಪಡೆದುಕೊಳ್ಳುವಲ್ಲಿ ಒಗ್ಗಟ್ಟಾಗಿ ಸೇರಿ ಯಶಸ್ವಿ ಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಜತೆ ಕಾರ್ಯ ದರ್ಶಿ ಲಿಗೋಧರ್ ಸುಳ್ಯ ಮಾತನಾಡಿ ಎನ್ ಪಿ ಎಸ್ ನಿವೃತ್ತಿ ಪಡೆದುಕೊಂಡಿರುವ ಸದಸ್ಯರು ಯಾವುದೇ ಸಭೆ ಬರುವುದಿಲ್ಲಾ ಹಾಗು ಕಷ್ಟ ಕಾಲದಲ್ಲಿ ಪ್ರಯೋಜನ ಪಡೆದುಕೊಂಡ ಟೈಲರ್ ನವರು ಸಭೆಗೆ ಬರುತ್ತಿಲ್ಲಾ , ಎಲ್ಲರೂ ಬರಬೇಕು ಎಂದರು . ಸಭಾ ಅಧ್ಯಕ್ಷರು ಮಾತನಾಡಿ ಎರಡು ವರ್ಷದಲ್ಲಿ ನಡೆದ ವಿಚಾರವನ್ನು ಸಭೆಗೆ ತಿಳಿಸಿದರು. ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಟಿ ದಿವಾಕರ ಟೈಲರ್, ಪ್ರ,ಕಾರ್ಯದರ್ಶಿ ಆಶಾ ವಿ ರೈ, ಖಜಾಂಜಿ ಯಾಗಿ ತಿಲಕ ಪೈಚಾರು, ಉಪಾದ್ಯಕ್ಷರಾಗಿ ರವೀಂದ್ರ ಟೈಲರ್, ರಾಜೇಂದ್ರ ಜೈನ್ , ಸದದಸ್ಯರಾಗಿ ತಾರ ಆರ್ ರೈ, ಪುಷ್ಪಲತಾ , ಬಾಬು ಮಣಿಯಾಣಿ., ಲಿಂಗಪ್ಪ ನೆಟ್ಟಣ, ಬೇಬಿನಾಥ ಬೆಳ್ಳಾರೆ, ದಿನೇಶ್ ಕೊಡಪಾಲ, ಶಿವರಾಮ ಅಡ್ತಲೆ, ಪದ್ಮಾವತಿ ಕಲ್ಲುಗುಂಡಿ ಅಯ್ಕೆ ಮಾಡಲಾಯಿತು. ಕುಸುಮಾಧರ ರೈ ಬೂಡು ಕಾರ್ಯ ಕ್ರಮ ನಿರೂಪಿಸಿ, ವಿಜಯಕುಮಾರ್ ರೈ ವಂದಿಸಿದರು ,ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಗೊಂಡಿತು.