Ad Widget

ಅನ್ಸಾರಿಯಾ ಜೀಲಾನಿ ಅನುಸ್ಮರಣೆ ಮತ್ತು ಗ್ರಂಥಾಲಯ ಉದ್ಘಾಟನೆ

ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳ ಒಕ್ಕೂಟವಾದ ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಷನ್ ಇದರ ಅಧೀನದಲ್ಲಿ ಜೀಲಾನಿ ಅನುಸ್ಮರಣಾ ಸಂಗಮವು ಡಿ.9 ರಂದು ಅನ್ಸಾರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅನ್ಸಾರಿಯಾ ದ‌ಅವಾ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾಗಿರುವ ಇಮಾಮ್ ಗಝ್ಝಾಲಿ ಗ್ರಂಥಾಲಯದ ಉದ್ಘಾಟನೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ನಿರ್ವಹಿಸಿದರು.

. . . . .

ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆಯನ್ನು ನೀಡಿದ ಉಮರ್ ಮುಸ್ಲಿಯಾರ್ ಉಸ್ತಾದರು ಜೀಲಾನಿ ಅನುಸ್ಮರಣಾ ಭಾಷಣವನ್ನು ಮಾಡಿದರು.ಅನ್ಸಾರಿಯಾ ಸಂಸ್ಥೆಯ ನಿರ್ದೇಶಕರಾದ‌ ಅಬ್ದುಲ್ ಹಮೀದ್ ಬೀಜಕೊಚ್ಚಿ,ಮುಹಿಯದ್ದೀನ್ ಹಾಜಿ ಫ್ಯಾನ್ಸಿ ಹಿತನುಡಿಗಳನ್ನಾಡಿದರು.ಬಳಿಕ ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳಾದ ಮುಹಮ್ಮದ್ ಇಲ್ಯಾಸ್,ಸ್ವಲಾಹುದ್ದೀನ್ ಅಯ್ಯೂಬ್,ಮುಹಮ್ಮದ್ ಶರೀಕ್,ಮುಹಮ್ಮದ್ ಸಮೀಲ್,ಮುಹಮ್ಮದ್ ಮುಸ್ತಫಾ ಪೂರ್ವಿಕ ಮಹಾತ್ಮರುಗಳ ಕುರಿತು ಸಭೆಯಲ್ಲಿ ಮಾತನಾಡಿದರು.

ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳು ಹೊರತರುವ ಕೈಬರಹ ಮಾಸಿಕವನ್ನು ಪ್ರಕಟಿಸಿದ ಬಳಿಕ
ಜೀಲಾನಿ ಅನುಸ್ಮರಣಾ ಪ್ರಯುಕ್ತ ನಡೆಸಿದ ರಸಪ್ರಶ್ನೆ ಸ್ಪರ್ಧೆಯ ವಿಜೇತರಾದ ಮುಹಮ್ಮದ್ ಇಲ್ಯಾಸರಿಗೆ ಬಹುಮಾನವನ್ನು ವಿತರಿಸಲಾಯಿತು.
ಪ್ರಸ್ತುತ ಸಭೆಯಲ್ಲಿ ಸಂಸ್ಥೆಯ ಮತ್ತೋರ್ವ ನಿರ್ದೇಶಕರಾದ ಕೆ,ಬಿ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.ದ‌ಅವಾ ಕಾಲೇಜು ಅಧ್ಯಾಪಕರಾದ ಅಬೂಬಕ್ಕರ್ ಸಖಾಫಿ ವಿಟ್ಲ,ಹಂಝತುಕರ್ರಾರ್ ಮುಈನಿ,ಝುಬೈರ್ ಹಿಮಮಿ, ನೌಶಾದ್ ಮದನಿ,ಉವೈಸ್ ಬೀಟಿಗೆ,ಸಿದ್ದೀಕ್ ಮಾಸ್ಟರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಸಭೆಯ ಕೊನೆಯಲ್ಲಿ ಮುಹಮ್ಮದ್ ಮುಝಮ್ಮಿಲ್,ಸಫ್ವಾನ್,
ಮಿದ್‌ಲಾಜ್,ಮುಸ್ತಫಾ
ಅಬೂಬಕ್ಕರ ಸಿ ಎಂ, ಮುಹಿಯದ್ದೀನ್ ಮಾಲೆಯನ್ನು ಆಲಾಪಿಸಿದರು.

ಅನ್ಸಾರಿಯಾ ದ‌ಅವಾ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಅಫ್ವಾನ್ ಸ್ವಾಗತಿಸಿ,ವಂದಿಸಿದ ಸಭೆಯಲ್ಲಿ ಮುಝಮ್ಮಿಲ್ ಕಿರಾಅತ್ ಪಠಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!