
ಹಲವಾರು ವರ್ಷಗಳಿಂದ ಜನರ ಜೀವನಾಡಿಯಾಗಿದ್ದ ಸರಕಾರಿ ಬಸ್ ಮಡಪ್ಪಾಡಿಗೆ ಬಾರದೇ ಸಂಚಾರಕ್ಕೆ ತೊಂದರೆಯಾಗಿತ್ತು. ಖಾಸಗಿ ವಾಹನಗಳಲ್ಲಿ ನೇತಾಡುವ ಪರಿಸ್ಥಿತಿ ಬಂದಿತ್ತು. ಪ್ರತಿ ದಿನ ಸಂಜೆ 6.30 ಸುಳ್ಯದಿಂದ ಹೊರಟು ಉಬರಡ್ಕ ಮಾರ್ಗವಾಗಿ ಬಂದು ರಾತ್ರಿ ನಿಂತು ಬೆಳಿಗ್ಗೆ ಹೊರಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಕೊರೊನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಎ.ಪಿ.ಯಂ.ಸಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ಹಾಗೂ ಸಚಿನ್ ಬಳ್ಳಡ್ಕ ರವರು ಮನವಿ ಸಲ್ಲಿಸಿ ಒತ್ತಾಯಿಸಿದ್ದರು.