
ಸುಳ್ಯ ಗ್ರಾ.ಪಂ ಚುನಾವಣೆಗೆ ಸಂಬಂಧಿಸಿ ಮತಪತ್ರ ಮುದ್ರಣ ಮಾಡಲು ಆಯಾ ತಾಲೂಕುಗಳಿಗೆ ನೋಡಲ್ ಆಧಿಕಾರಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗ ನೇಮಕ ಮಾಡಿದ್ದು ಸುಳ್ಯ ತಾಲೂಕಿಗೆ ಸುಳ್ಯದ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜ್ ಮುತ್ಲಾಜೆ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ . ಮತಪತ್ರಗಳನ್ನು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ತಯಾರಿಸುವುದು , ಮತಪತ್ರಗಳನ್ನು ತಯಾರಿಸುವ ಕುರಿತು ಗ್ರಾಮ ಪಂಚಾಯತ್ ಚುನಾವಣಾಧಿಕಾರಿಗಳ ಕೈಪಿಡಿ ಅಧ್ಯಾಯ -9 ರಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿಕೊಂಡು ಯಾವುದೇ ಲೋಪಗಳು ಆಗದಂತೆ ಮತಪತ್ರಗಳನ್ನು ಮುದ್ರಣ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ .