
ಸುಳ್ಯ ನಗರ ಪಂಚಾಯತ್ ಗೆ ಸಂಬಂಧಪಟ್ಟ ಗಾಂಧಿನಗರದಲ್ಲಿ ಇರುವ ವಾಣಿಜ್ಯ ಕಟ್ಟಡ ದುರ್ಬಳಕೆ ಗೊಂಡಿರುವುದಾಗಿ ಈ ಕಟ್ಟಡಗಳಲ್ಲಿ ಇತರ ಜಾತಿಯವರು ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಇಂದು ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮತ್ತು ನ.ಪಂ. ಮುಖ್ಯ ಅಧಿಕಾರಿ ಎಮ್.ಆರ್. ಸ್ವಾಮಿರವರಿಗೆ ಮನವಿ ನೀಡಿದರು. ಮನವಿಯಲ್ಲಿ ಎಸ್ ಸಿ, ಎಸ್ ಟಿ ಯವರು ಲೈಸೆನ್ಸ್ ಮಾಡಿ ವ್ಯಾಪಾರ ಮಾಡದೆ, ಲೈಸೆನ್ಸ್ ದುರ್ಬಳಕೆ ಮಾಡಿಕೊಂಡು ಬಂದಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸರಿಯಾಗಿ ಅಂಗಡಿಗಳಲ್ಲಿ ನಿಂತು ತಮ್ಮ ಜೀವನ ರೂಪಿಸಿಕೊಳ್ಳುವವರಿಗೆ ಮುಂದೆ ಅವಕಾಶ ನೀಡಬೇಕು ಹಾಗೂ ಇದರ ದುರ್ಬಳಕೆಗೆ ಕೈಜೋಡಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಇತರ ಜಾತಿಯವರನ್ನು ಕಟ್ಟಡದಿಂದ ತೆರವುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಕೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ದ.ಕ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಸುಳ್ಯ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಅಡ್ಕಬಳೆ ಉಪಸ್ಥಿತರಿದ್ದರು.