

ಸುಬ್ರಹ್ಮಣ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ರಾವ್, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ ಅವಿರೋಧ ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ ದಲ್ಲಿ ಡಿ.8 ರಂದು ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ನಡೆಯಿತು. ಕೋಶಾಧಿಕಾರಿಯಾಗಿ ಭರತ್ ನೆಕ್ರಾಜೆ, ಗೌರವಾಧ್ಯಕ್ಷರಾಗಿ ನಿಕಟಪೂರ್ವಾಧ್ಯಕ್ಷ ದಿನೇಶ್ ಹಾಲೆಮಜಲು ಉಪಾಧ್ಯಕ್ಷ ರಾಗಿ ಲೋಕೇಶ್ ಬಿ.ಎನ್, ಸಂಚಾಲಕರಾಗಿ ವಿಶ್ವನಾಥ ನಡುತೋಟ, ಜತೆಕಾರ್ಯದರ್ಶಿಯಾಗಿ ಪ್ರಕಾಶ್ ಸುಬ್ರಹ್ಮಣ್ಯ, ನಿರ್ದೇಶಕರಾಗಿ ಶಿವರಾಮ ಕಜೆಮೂಲೆ, ಸಹ ನಿರ್ದೇಶಕರಾಗಿ ದಯಾನಂದ ಕಲ್ನಾರು ಆಯ್ಕೆಯಾಗಿದ್ದಾರೆ.