Ad Widget

ಆಸಿಯ ಕಲೀಲ್ ಪ್ರಕರಣ : ಸಂಧಾನ ವಿಫಲ – ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಮತ್ತೆ ಧರಣಿ ಕುಳಿತ ಆಸಿಯ

ಸುಳ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಕಲೀಲ್ ಕಟ್ಟೆಕ್ಕಾರ್ ಪ್ರಕರಣವು ಇಂದು ನಡೆದ ಸಂಧಾನಕಾರರ ಸಭೆಯಲ್ಲಿ ಅಂತಿಮ ನಿರ್ಣಯ ಸಿಗದ ಕಾರಣ ಆಸಿಯ ಮತ್ತೊಮ್ಮೆ ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಮತ್ತೊಮ್ಮೆ ಧರಣಿ ಕುಳಿತ ಘಟನೆ ಇಂದು ನಡೆದಿದೆ.

. . . . . . . . .


ಘಟನೆಯ ವಿವರ : ಈ ಪ್ರಕರಣವನ್ನು ಶಮನಗೊಳಿಸಲು ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ರಂದು ಸಭೆ ಸೇರಿ , ಕಲೀಲ್ ರವರ ತಂದೆ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ ದೀರ್ಘ ಸಭೆಯನ್ನು ನಡೆಸಿ ಡಿಸೆಂಬರ್ 9ರಂದು ಕಲೀಲ್ ರವರನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ಅವರ ತಂದೆಗೆ ನಿರ್ದೇಶನವನ್ನು ನೀಡಲಾಗಿತ್ತು. ಆದರೆ ಇಂದು ನಡೆದ ಸಭೆಗೆ ಕಲೀಲ್ ಬಾರದ ಕಾರಣ ಅಂತಿಮ ನಿರ್ಣಯವನ್ನು ಮಂಡಿಸಿ ಪ್ರಕರಣಕ್ಕೆ ಸುಖಾಂತ್ಯವನ್ನು ಗೊಳಿಸಲು ಮುಸ್ಲಿಂ ಮುಖಂಡರಿಗೆ ಸಾಧ್ಯವಾಗಲಿಲ್ಲ. ಸಂಜೆ 6 ಗಂಟೆಯ ವೇಳೆಗೆ ಮುಖಂಡರು ಮತ್ತು ಆಸಿಯಾ ಸುಳ್ಯ ವೃತ್ತ ನಿರೀಕ್ಷಕರ ಕಛೇರಿಗೆ ತೆರಳಿ ಇಂದು ನಡೆದ ಘಟನೆಗಳನ್ನು ವಿವರಿಸಿ ಕಳೆದ ಹಲವು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಸಮಿತಿ ವತಿಯಿಂದ ಈ ಘಟನೆಯನ್ನು ಸುಖಾಂತ್ಯ ಗೊಳಿಸಲು ಹಲವಾರು ಬಾರಿ ಪ್ರಯತ್ನಿಸಿದರು ಕಲೀಲ್ ಮತ್ತು ಅವರ ತಂದೆ ಹಾಗೂ ಸಹೋದರ ಇದಕ್ಕೆ ಸ್ಪಂದನೆ ನೀಡದ ಕಾರಣ ಪ್ರಕರಣವನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಅನಾಹುತಗಳು ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಮ್ಮ ವತಿಯಿಂದ ಹೇಳಿಕಾ ಪತ್ರವನ್ನು ನೀಡಿ, ಆಸಿಯ ರವರನ್ನು ಸುಳ್ಯ ಗಾಂಧಿನಗರದ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಬಿಟ್ಟು ಹೋಗಿರುತ್ತಾರೆ. ಇದೀಗ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಅಮರ ಸುಳ್ಯ ಸುದ್ದಿ ಪತ್ರಿಕೆಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ಮಾತನಾಡಿ ಒಬ್ಬ ಹಿಂದೂ ಧರ್ಮದ ಮಹಿಳೆ ಮುಸ್ಲಿಂ ಧರ್ಮಕ್ಕೆ ಬಂದು ನಡುಬೀದಿಯಲ್ಲಿ ಬಿದ್ದಾಗ ಅವಳಿಗೆ ನ್ಯಾಯ ಕೊಡಿಸುವುದು ನಮ್ಮ ಧರ್ಮವಾಗಿದೆ. ಕಲೀಲ್ ರವರು ಇವರನ್ನು ಮದುವೆ ಮಾಡಿಕೊಂಡು ಈಗ ಸಂಪರ್ಕಕ್ಕೆ ಸಿಗದೇ ಇರುವುದರಲ್ಲಿ ಅರ್ಥವಿಲ್ಲ. ಇದರಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಪ್ಪುಚುಕ್ಕೆ ಆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಹಲವಾರು ಬಾರಿ ಶ್ರಮಿಸಿದೆವು. ಆದರೆ ಕಲೀಲ್ ರವರ ಭಾಗದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಘಟನೆಯು ಬೆಳೆಯುತ್ತಾ ಬರುತ್ತಿದೆ. ಅತೀ ಶೀಘ್ರದಲ್ಲಿ ಈ ವಿಷಯ ಸುಖಾಂತ್ಯಗೊಂಡ ಅವರಿಬ್ಬರು ಶಾಂತಿಯಿಂದ ಕೂಡಿ ಬಾಳುವ ಅವಕಾಶ ಬರುತ್ತದೆ ಎಂಬ ವಿಶ್ವಾಸ ನಮ್ಮಲ್ಲಿ ಇದೆ ಎಂದು ಹೇಳಿದರು . ಮುಂದಿನ ದಿನಗಳಲ್ಲಿ ಈ ಪ್ರಕರಣವು ಯಾವ ದಿಕ್ಕಿನತ್ತ ಸಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಕಾರಣಗಳು ಏನೇ ಇದ್ದರೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಲೇ ಬೇಕಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading