ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಆ ಪ್ರಯುಕ್ತ ಚರ್ಚಿಸಲು ಕಾರ್ಯಕರ್ತರ ಸಭೆ ಇಂದು ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷ ತೆಯನ್ನು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು ಅವರಿಗೆ ಪಕ್ಷದಿಂದ ಸಹಕಾರ ನೀಡಲಾಗುವುದು. ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ರಾಜ್ಯದಲ್ಲಿ ಮಾಡಿರುವ ಕಾರ್ಯಕ್ರಮಗಳ ಕುರಿತು ಕಾರ್ಯಕರ್ತರು ಪ್ರತೀ ಮನೆಗೆ ತಲುಪಿಸುವಂತೆ ಅವರು ಕರೆ ನೀಡಿದರು.
ಜೆಡಿಎಸ್ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಪ್ರಾರ್ಥಿಸಿದರು. ಸತ್ಯ ನಾರಾಯಣ ಚಿಮ್ಟಿಕಲ್ ವಂದಿಸಿದರು. ಪ್ರಮುಖರಾದ ಮಹಾಲಕ್ಷ್ಮಿ ಕೊರಂಬಡ್ಕ, ದೇವಣ್ಣ ಶೆಟ್ಟಿ, ಹನೀಫ್ ಮೊಟ್ಟೆಂಗಾರ್ ಮತ್ತಿತರರಿದ್ದರು.