ನೂತನ ಕೃಷಿ ಕಾನೂನು ಖಂಡಿಸಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಳ್ಳಾರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬ್ಯಾಂಕ್, ಸರ್ಕಾರಿ ಬಸ್ಸು, ಆಟೋರಿಕ್ಷಾ, ಖಾಸಗಿ ವಾಹನಗಳು, ಪೆಟ್ರೋಲ್ ಬಂಕ್ ಎಂದಿನಂತೆ ಸೇವೆ ನೀಡುತ್ತಿದ್ದು ಜನಸಂಚಾರ ಎಂದಿನಂತಿದೆ.