


ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ ಎಸ್ ಎಫ್ ಮೊಗರ್ಪಣೆ ಶಾಖೆ ಇದರ ಮಹಾಸಭೆ ಡಿಸೆಂಬರ್ 6 ರಂದು ಮೊಗರ್ಪಣೆ ಮದರಸಾ ಸಭಾಂಗಣದಲ್ಲಿ ನಡೆಯಿತು. ಜಯನಗರ ಮದರಸ ಸದರ್ ಮೊಹಲ್ಲಿಂ ಅಬ್ದುಲ್ ಕರೀಮ್ ಸಖಾಫಿ ಕಟ್ಟತ್ತಾರ್ ದುಆ ನೆರೆವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷರಾದ ಅಸಿಫ್ ಜಯನಗರ ಅಧ್ಯಕ್ಷತೆಯನ್ನು ವಹಿಸಿದ್ದರು. ಸೆಕ್ಟರ್ ಸಮಿತಿಯಿಂದ ಆಗಮಿಸಿದ ಸಿದ್ದೀಕ್ ಹಿಮಮಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ, ಶರೀಫ್ ಜಯನಗರ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಎಸ್ಎಸ್ಎಫ್ ಸಂಘಟನೆಯ ನಾಯಕರುಗಳಾದ ಸಿದ್ದೀಕ್ ಎಲಿಮಲೆ,ನಾಸಿರ್ ಎಲಿಮಲೆ,ಬಶೀರ್ ಕಲ್ಲುಮುಟ್ಲು ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಎಸ್.ಎಮ್.ಎ ಜಿಲ್ಲಾ ಚುನಾವಣಾಧಿಕಾರಿ ಹಸೈನಾರ್ ಜಯನಗರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ಜುನೈದ್ ಎಸ್.ಯು,ಪ್ರಧಾನ ಕಾರ್ಯದರ್ಶಿಯಾಗಿ ಮಶೂದ್,ಕೋಶಾಧಿಕಾರಿಯಾಗಿ ಗಫೂರ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ನಾಸಿರ್ ಮುಸ್ಲಿಯಾರ್ ಹಾಗೂ ಸವಾದ್ ಪೈಚಾರ್,ಕಾರ್ಯದರ್ಶಿಗಳಾಗಿ ಸಿದ್ದೀಕ್ ಬೆಟ್ಟಂಪಾಡಿ,ಸಾದಿಕ್ ಪೈಚಾರ್,ಅಫ್ಲಹ್,ಮಿಸ್ಬಾಹ್,ತೌಫೀಕ್ ಜಯನಗರ , ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ 14 ಮಂದಿ ಆಯ್ಕೆಯಾದರು. ಕಾರ್ಯದರ್ಶಿ ಶಾಕಿರ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಮಸೂದ್ ವಂದಿಸಿದರು.